ಸುದ್ದಿ

ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೀವು ಎಂದಾದರೂ ನೋಡಿದ್ದೀರಾ?ಅಲ್ಲಿನ ಅದ್ಬುತ ವಿಶೇಷತೆಗಳೇನು ಗೊತ್ತಾ,…

By admin

October 18, 2019

ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ .

ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಈ ರಾಮ ಮಂದಿರವು ಧರ್ಮಸ್ಥಳಕ್ಕೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ.

ರಾಮ ನೆಲೆಸಿದ್ದ ಸ್ಥಳ : ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ನಂತರ ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಮತ್ತು ಯೋಗ ಗುರುಗಳಾಗಿದ್ದ ವಿಶೇಷ ದೈವಿಕ ಶಕ್ತಿಗಳನ್ನು ಹೊಂದಿದ್ದ ನಿತ್ಯಾನಂದ ಸ್ವಾಮಿ ಅವರು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಉಳಿದುಕೊಂಡಿದ್ದರು ಆಗ ಅವರು ಇಲ್ಲಿ ರಾಮನ ಮಂದಿರ ನಿರ್ಮಾಣವಾಗ ಬೇಕೆಂದು ಭಾವಿಸಿದ್ದರು.

ಯಾರು ನಿರ್ಮಿಸಿದ್ದು? : 1978 ರ ವರೆಗೆ ಇಲ್ಲಿ ಬರೀ ಒಂದು ನಿತ್ಯಾನಂದ ಆಶ್ರಮವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ.1978 ರಲ್ಲಿ ಬೆಂಗಳೂರಿನ ಶ್ರೀ ಬಾಲಾ ಶಿವಯೋಗಿ ಮಹಾರಾಜ್ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕಿದರು. ನಂತರ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಎರಡು ಎಕರೆ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.2007 ರಲ್ಲಿ ಮಂದಿರದ ‘ಪ್ರತಿಷ್ಠ ಬ್ರಹ್ಮಕಲಾಶೋತ್ಸವ’ವನ್ನು 45 ದಿನಗಳ ಕಾಲ ನಡೆಸಲಾಯಿತು.

ಯಾವಾಗ ಭೇಟಿ ನೀಡುವುದು ಸೂಕ್ತಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಧರ್ಮಸ್ಥಳವು ಅತ್ಯಂತ ಅನುಕೂಲಕರ ಹವಾಮಾನವನ್ನು ಹೊಂದಿರುತ್ತದೆ. ಹೀಗಾಗಿ, ಹೆಚ್ಚಿನ ಪ್ರವಾಸಿಗರು ಈ ಅವಧಿಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ.

ತಲುಪುವುದು ಹೇಗೆ?ದೇವಾಲಯವು ಮಂಜುನಾಥ ದೇವಸ್ಥಾನದಿಂದ ಪೂರ್ವಕ್ಕೆ3.5 ಕಿ.ಮೀ ದೂರದಲ್ಲಿರುವ ಬೆಳ್ತಂಡಿಗೆ ಹೋಗುವ ಮಾರ್ಗದಲ್ಲಿದೆ. ಕನ್ಯಾಡಿ ಶ್ರೀ ರಾಮ ಕ್ಷೇತ್ರವು ಮಂಗಳೂರಿನಿಂದ 74ಕಿಲೋಮೀಟರ್ ದೂರದಲ್ಲಿದೆ. ಮಂಗಳೂರು – ಧರ್ಮಸ್ಥಳ ರಸ್ತೆಯಲ್ಲಿರುವ ಧರ್ಮಸ್ಥಳಕ್ಕೆ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕಾರಣ ಈ ಸ್ಥಳಕ್ಕೆ ಭೇಟಿ ನೀಡುವುದು ಅಷ್ಟೊಂದು ಕಷ್ಟವೇನಲ್ಲ. ಸ್ಥಳೀಯ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಶ್ರವಣ ಬೆಳಗೋಳದವರೆಗೆ ಸುಲಭವಾಗಿ ಲಭ್ಯವಿವೆ, ಇದು ಹತ್ತಿರದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದ್ದರಿಂದ, ರಾಮ ಮಂದಿರವನ್ನು ನಗರದ ಎಲ್ಲಾ ಭಾಗಗಳಿಂದ ಸುಲಭವಾಗಿ ಪ್ರವೇಶಿಸಬಹುದು.