ಸುದ್ದಿ

ರಜನಿಕಾಂತ್‌ ಬಳಿ ಇರುವ ಆಸ್ಥಿಯ ಮೌಲ್ಯವೆಷ್ಟು ಗೊತ್ತಾ?

By admin

February 11, 2020

ಟಾಲಿವುಡ್‌ ಸ್ಟಾರ್‌ ರಜಿನಿಕಾಂತ್‌ ಎಲ್ಲರೂ ಮೆಚ್ಚುವ ಬಹುದೊಡ್ಡ ಕಲಾವಿದ. ಅವರು ಚಿತ್ರರಂಗ ಕಾಲಿಟ್ಟ ದಿನದಿಂದ ಇಂದಿನವರೆಗೂ ಅದೇ ಪ್ರಾಮುಖ್ಯತೆಯನ್ನೂ ಮುಂದುವರೆಸಿಕೊಡೇ ಬಂದಿದ್ದಾರೆ. 1975ರಲ್ಲಿ ತೆರೆಕಂಡ ಅಪೂರ್ವ ರಾಗಂಗಳ್ ಚಿತ್ರದಿಂದ ಇದುವರೆಗೂ 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ಸೂಪರ್ ಸ್ಟಾರ್ ಆಗಿದ್ದೇ ಒಂದು ಅದ್ಭುತ ಸ್ಟೋರಿ. 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದ ರಜಿನಿಕಾಂತ್ ಅವರ ಚಿತ್ರಗಳು ಅನೇಕ ಬಾರಿ ವಿವಾದಗಳಿಗೂ ಕಾರಣವಾಗಿವೆ. ರಜನಿಕಾಂತ್‌ ತಮ್ಮ ನಾಲ್ಕು ದಶಕಗಳ ಚಿತ್ರರಂಗದ ಬದುಕಿನಲ್ಲಿ ಸಾಗರೋಪಾದಿಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅರಿಗಾಗಿಯೇ ಸಂಘಗಳು ಜನ್ಮತಾಳಿದೆ.

ಮೂಲಗಳ ಪ್ರಕಾರ, ರಜಿನಿಕಾಂತ್ ಅವರ ಒಟ್ಟು ಆಸ್ತಿಯ ಮೌಲ್ಯ 55 ಮಿಲಿಯನ್ ಡಾಲರ್. ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ 391 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇದಲ್ಲದೆ 110 ಕೋಟಿ ರೂಪಾಯಿ ಹಣವನ್ನ ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಚೆನ್ನೈನ ಪ್ರತಿಷ್ಠಿತ ಪೋಯೆಸ್ ಗಾರ್ಡನ್ನಲ್ಲಿ ಭವ್ಯವಾದ ಬಂಗಲೆಯನ್ನ ಹೊಂದಿದ್ದಾರೆ. ಆ ಮನೆಯ ಇಂದಿನ ಮಾರುಕಟ್ಟೆ ಬೆಲೆ 35 ರಿಂದ 40 ಕೋಟಿ ಎಂದು ಅಂದಾಜು ಮಾಡಲಾಗುತ್ತದೆ.

ಇದನ್ನು ಬಿಟ್ಟು ಸ್ಟಾರ್‌ ನಟರಿಗೆ ಇರಲೇಬೇಕಾದದ್ದು ಕಾರ್‌ ಕ್ರೇಜ್‌ ಇದು ರಜಿನಿಯವರಿಗೂ ಇದೆ. ಅವರ ಬಳಿಯಲ್ಲಿ 2 ಐಷರಾಮಿ ಕಾರುಗಳಿವೆ. ಅದರಲ್ಲಿ ಒಂದು ಆಡಿ ಎಕ್ಸ್ಕ್ಲೂಸಿವ್, ಮತ್ತೊಂದು ಜಾಗ್ವಾರ್. ಆ ಒಂದೊಂದು ಕಾರುಗಳ ಬೆಲೆ 65 ಲಕ್ಷದಿಂದ ಒಂದು ಕೋಟಿ . ಅವುಗಳ ಹೊರತಾಗಿ ಒಂದು ಅಂಬಾಸಿಡರ್ ಸೇರಿದಂತೆ ಇನ್ನೂ 5 ಕಾರುಗಳು ರಜಿನಿಕಾಂತ್ ಅವರ ಬಳಿ ಇದೆ.ಇವೆಲ್ಲದರ ಮಧ್ಯೆ ಇರುವ ಮತ್ತೊಂದು ವಿಚಾರವೆಂದರೆ ರಜಿನಿಕಾಂತ್ ಅವರು ವಾರ್ಷಿಕ ಎಷ್ಟು ಹಣ ಗಳಿಸುತ್ತಾರೋ ಅದರ ಅರ್ಧದಷ್ಟು ಹಣವನ್ನ ಚಾರಿಟಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ ಎಂಬುದು ಅವರ ಸಾಮಾಜಿ ಪ್ರಜ್ಞೆಗೆ ಹಿಡಿದ ಕೈಗನ್ನಡಿ ಅಂಬೋಣ.