ಆರೋಗ್ಯ

ಒಣ ದ್ರಾಕ್ಷಿ ನೆನೆಸಿದ ನೀರನ್ನು ಚೆಲ್ಲುವ ಬದಲು, ಪ್ರತಿದಿನ ಬೆಳ್ಳಗ್ಗೆ ಒಂದು ಗ್ಲಾಸ್ ಒಣ ದ್ರಾಕ್ಷಿ ನೀರು ಕುಡಿದು ನೋಡಿ…

By admin

April 24, 2019

ಒಣದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಗೋಡಂಬಿ ಜೊತೆ ತಿನ್ನಲು ತುಂಬಾ ಸಿಹಿಯಾಗಿರುತ್ತದೆ. ಅದನ್ನು ಹಾಗೇ ತಿನ್ನುವ ಬದಲು ನೀರಿನಲ್ಲಿ ನೆನೆಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

ಆದರೆ ಒಣದ್ರಾಕ್ಷಿ ತಿಂದ ಬಳಿಕ ನೆನೆಸಿದ ನೀರನ್ನು ಚೆಲ್ಲುತ್ತೇವೆ. ಆ ನೀರಿನಿಂದ ಆಗುವ ಪ್ರಯೋಜನ ತಿಳಿದರೆ ಖಂಡಿತ ಎಸೆಯುವುದಿಲ್ಲ.

* ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ನೆನೆಸಿದ ನೀರನ್ನು ಕುದಿಸಿ ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿ ಹಾಗೂ ಆಯಾಸ ಸಮಸ್ಯೆ ದೂರವಾಗುತ್ತದೆ.

* ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ.

* ಇದು ದೇಹದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

* ಮುಖದ ಮೇಲಿನ ಸುಕ್ಕನ್ನು ಕಡಿಮೆ ಮಾಡಿ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ.

* ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.

* ಪ್ರತಿದಿನ ಈ ನೀರು ಕುಡಿಯುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ. ಚಯಾಪಚಯ ಮಟ್ಟವನ್ನು ನಿಯಂತ್ರಿಸುತ್ತದೆ.