ಸುದ್ದಿ

ಈ ವಿಲನ್ ತನ್ನ ಹೆಂಡತಿಯನ್ನು ಹೇಗೆ ಕಳೆದುಕೊಂಡರು ಗೊತ್ತಾ, ಕಣ್ಣಲ್ಲಿ ನೀರು ಬರುತ್ತೆ.

By admin

March 05, 2020

ಟಾಪ್ ವಿಲನ್ ಗಳಲ್ಲಿ ಇವರು ಒಬ್ಬರು. ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ ಈ ನಟ. ತೆಲುಗಿನ ಪೌರ್ಣಮಿ, ತುಳಸಿ, ಮುನ್ನ, ಅರುಂಧತಿ ಕನ್ನಡದ ಶ್ರೀ, ಯೋಧ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಆದರೆ ಈತನ ಸುಂದರ ಸಂಸಾರ 10 ವರ್ಷಗಳ ಹಿಂದೆ ಛಿದ್ರ ಛಿದ್ರವಾಯಿತು. ಅದಕ್ಕೆ ಕಾರಣ ಏನು? ಆನಂತರ ಏನಾಯಿತು? ಗೊತ್ತಾ?? 1998 ರಲ್ಲಿ ರೀನಾ ಎನ್ನುವವರನ್ನು ಮದುವೆಯಾದ ರಾಹುಲ್ ಗೆ ಒಂದು ಮುದ್ದಾದ ಮಗು ಹುಟ್ಟಿತು. ಹೆಂಡತಿಯೆಂದರೆ ಹುಚ್ಚು ಪ್ರೀತಿ ಬೆಳೆಸಿಕೊಂಡಿದ್ದರು ರಾಹುಲ್. ಆದರೆ ಮಗು ಹುಟ್ಟಿದ ಏಳು ವರ್ಷಕ್ಕೆ ಈತನ ಹೃದಯ ಛಿದ್ರವಾಯಿತು.

ತನ್ನ ಹೆಂಡತಿ ರೀನಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು. ಇದನ್ನು ತಿಳಿದ ರಾಹುಲ್ ಮನೆಯಿಂದ ಹೊರಗೆ ಕೂಡ ಬರಲಿಲ್ಲ. ಹಲವಾರು ದಿನ ಸೂರ್ಯನ ಮುಖವನ್ನು ಕೂಡ ನೋಡಿರಲಿಲ್ಲ. ಏಕೆಂದರೆ ಹೆಂಡತಿಗೆ ಕ್ಯಾನ್ಸರ್ ಇದೆ ಅನ್ನುವುದು ಈತನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಹೆಂಡತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ತುಂಬಾನೇ ಕಷ್ಟ ಪಟ್ಟರು ರಾಹುಲ್.

ಆದರೆ ಅದು ಸಾಧ್ಯವಾಗದೇ 2009ರಲ್ಲಿ ರಾಹುಲ್ ತನ್ನ ಹೆಂಡತಿ ರೀನಾರನ್ನು ಕಳೆದುಕೊಂಡರು. ಆಗ ಮಗುವಿಗೆ ಇನ್ನೂ ಏಳು ವರ್ಷ ವಯಸ್ಸು. ತಾಯಿಯ ಸಾವಿನ ಬಗ್ಗೆ ಅರಿವಿಲ್ಲದೆ ಆ ಮಗು ಪ್ರತಿದಿನ ಅಮ್ಮ ಅಮ್ಮ ಎಂದು ಅಳುತ್ತಿದ್ದಾಗ ಆ ನೋವನ್ನು ಭರಿಸಲಾಗದೆ ರಾಹುಲ್ ರವರ ದುಃಖದ ಕಟ್ಟೆ ಒಡೆಯುತ್ತಿತ್ತು.

ನನ್ನ ಹೆಂಡತಿ ತುಂಬಾ ಸುಂದರವಾಗಿದ್ದಳು. ನಾನು 17 ವರ್ಷವಿದ್ದಾಗಲೇ ಆಕೆಯನ್ನು ಪ್ರೀತಿಸಲು ಶುರುಮಾಡಿದೆ. ನನಗಿಂತ ಒಂದು ವರ್ಷ ದೊಡ್ಡವಾಳಾಗಿದ್ದ ಆಕೆ ತುಂಬಾ ಬುದ್ಧಿವಂತೆ. ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಳು. ನನ್ನ ಹೆಂಡತಿ ನನ್ನಿಂದ ದೂರ ಆದ ಮೇಲೆ ನನ್ನ ಮತ್ತು ನನ್ನ ಮಗನ ಜೀವನ ಅಲ್ಲೋಲ ಕಲ್ಲೋಲವಾಯಿತು.

ತಾಯಿಗಾಗಿ ಅಳುತ್ತಿದ್ದ ನನ್ನ ಮಗನನ್ನು ನೋಡಿ ನನ್ನ ಹೃದಯ ಹಿಂಡುತ್ತಿತ್ತು. ನಾವಿಬ್ಬರು ಆಕೆಯ ಸವಿನೆನಪಿನಲ್ಲೇ ಬದುಕುತ್ತಿದ್ದೇವೆ ಎಂದು ಹೇಳಿ ಕಣ್ಣೀರು ಹಾಕುತ್ತಾರೆ ರಾಹುಲ್. ಮಗನನ್ನು ತುಂಬಾ ಪ್ರೀತಿಯಿಂದ ಸಾಕಿದ ರಾಹುಲ್ ಆತನನ್ನು ಓದಿಸಿ ದೊಡ್ಡವನನ್ನಾಗಿ ಮಾಡಿದ್ದಾರೆ. ಇನ್ನೊಂದು ಮದುವೆಯ ಬಗ್ಗೆ ಆಲೋಚಿಸದೆ ಮಗನ ಬೆಳವಣಿಗೆ ಬಗ್ಗೆ ಆಲೋಚಿಸಿದಂತಹ ರಾಹುಲ್ ರವರ ವ್ಯಕ್ತಿತ್ವವನ್ನ ನೋಡಿ ಮೆಚ್ಚಿಕೊಳ್ಳಲೇಬೇಕು.