ರಾಜಕೀಯ

ಬ್ರೆಕಿಂಗ್ ನ್ಯೂಸ್!ಬಡವರಿಗೆ ಸಿಗಲಿದೆಯಂತೆ ಪ್ರತೀ ತಿಂಗಳು 6000.!ರಾಹುಲ್ ಗಾಂಧಿ ಘೋಷಣೆ…

By admin

March 25, 2019

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬಡವರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 72 ಸಾವಿರ ರೂಪಾಯಿ ಜಮಾ ಆಗಲಿದೆಯಂತೆ.

ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ‘ನ್ಯಾಯ್ ಸ್ಕೀಂ’ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯಿಂದ 25 ಕೋಟಿ ಜನರಿಗೆ ಸಹಾಯವಾಗಲಿದೆ ಎಂದು ರಾಹುಲ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇದ್ರ ಲಾಭ ಹೇಗೆ ಬಡವರಿಗೆ ಸಿಗಲಿದೆ ಎಂಬುದನ್ನು ವಿವರಿಸಿದ್ದಾರೆ.

ದೇಶದ ಬಡವರ ಖಾತೆಗೆ ಪ್ರತಿ ವರ್ಷ 75 ಸಾವಿರ ರೂಪಾಯಿ ಜಮಾ ಆಗಲಿದೆ. ದೇಶದ ಶೇಕಡಾ 20ರಷ್ಟು ಜನರು ಇದ್ರ ಲಾಭ ಪಡೆಯಲಿದ್ದಾರೆ. ಪ್ರತಿ ವ್ಯಕ್ತಿಯ ಆದಾಯವನ್ನು 12 ಸಾವಿರಕ್ಕೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅಂದ್ರೆ ಒಬ್ಬ ವ್ಯಕ್ತಿಯ ತಿಂಗಳ ಸಂಬಳ 8 ಸಾವಿರ ರೂಪಾಯಿಯಿದೆ ಎಂದ್ರೆ ಸರ್ಕಾರ ಆತನಿಗೆ ಹೆಚ್ಚುವರಿ 4 ಸಾವಿರ ರೂಪಾಯಿ ನೀಡಲಿದೆ.

ವ್ಯಕ್ತಿ ತಿಂಗಳಿಗೆ 2 ಸಾವಿರ ರೂಪಾಯಿ ಗಳಿಸುತ್ತಿದ್ದರೆ ಸರ್ಕಾರ ಆತನಿಗೆ 10 ಸಾವಿರ ರೂಪಾಯಿ ಪ್ರತಿ ತಿಂಗಳು ನೀಡಲಿದೆ. ರಾಹುಲ್ ಗಾಂಧಿ ಪ್ರಕಾರ, ಈ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 72 ಸಾವಿರ ರೂಪಾಯಿ ಮೀಸಲಿಡಲಾಗುವುದು. 21ನೇ ಶತಮಾನದಲ್ಲಿ ದೇಶದಲ್ಲಿ ಬಡವರಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಪರ ಬಡವರಿಗೆ ನೀಡ್ತಿರುವ ದೊಡ್ಡ ಉಡುಗೊರೆ ಇದು ಎಂದಿದ್ದಾರೆ ರಾಹುಲ್.