ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖಾಸಗಿ ಕಂಪನಿಯಲ್ಲಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹವ್ಯಾಸಿ ಪತ್ರಕರ್ತರಾದಜನಾರ್ಧನ್ ರಾವ್ ಸಾಳಂಕೆ ಯವರು ಕನ್ನಡ ಚಿತ್ರರಂಗದ ಪವರ್ ಹೌಸ್ ಎಂದೇ ಖ್ಯಾತರಾದ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅವರ ಬಗ್ಗೆ ವಿಶೇಷ ಪುಸ್ತಕ ಬರೆಯುತ್ತಿದ್ದಾರೆ. ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವಿದ್ದು,ಆ ದಿನಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಪುಸ್ತಕಬರೆಯುತ್ತಿರುವುದು ಗಮನಾರ್ಹ.

ಅಪ್ಪು ಅವರ ಬಗ್ಗೆ ಕೇಳಿರದ ವಿಶೇಷ ವಿಷಯಗಳು ಮತ್ತು ಅತಿ ವಿರಳವಾದಫೋಟೋಗಳನ್ನು ಈ ಪುಸ್ತಕದಲ್ಲಿ ನೀವು ಕಾಣಬಹುದು. ಪುಸ್ತಕದ ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ. ಮುಂಬರುವಅಪ್ಪು ಅವರ ಹುಟ್ಟುಹಬ್ಬದಂದು (17ನೇ ಮಾರ್ಚ್ 2020) ಈ ಪುಸ್ತಕ ಲೋಕಾರ್ಪಣೆ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ.ಸುಮಾರು 20 ವರ್ಷಗಳಿಂದಲೂ ಇವರು ಹವ್ಯಾಸಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು “ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್” ಎಂಬ ಪುಸ್ತಕವನ್ನ ಸಾಳಂಕೆಯವರು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಅನ್ನಪೂರ್ಣ ಪ್ರಕಾಶನ, 12ನೇ ಜುಲೈ 2018). ಸಾಳಂಕೆಯವರು ಡಾ.ವಿಷ್ಣುವರ್ಧನ್ ಅವರ ಬಗ್ಗೆ 4 ಪುಸ್ತಕಮತ್ತು ಡಾ.ಶಿವರಾಜ್ ಕುಮಾರ್ ಬಗ್ಗೆ 1 ಪುಸ್ತಕವನ್ನ ಬರೆದಿದ್ದಾರೆ.

ಇದರ ಹೊರತಾಗಿಯೂ ನಾಲ್ಕೈದು ಚಿತ್ರಗಳ ಮೇಕಿಂಗ್ ಬಗ್ಗೆ ವಿಶೇಷ ಪತ್ರಿಕೆಗಳನ್ನುಹೊರತಂದಿದ್ದಾರೆ. 2009ರಲ್ಲಿ ಡಾ.ವಿಷ್ಣುವರ್ಧನ್ ಅವರ ಕೊನೆಯ ಸಂದರ್ಶನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…
ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಈ ವರ್ಷ ಸೆಪ್ಟೆಂಬರ್ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ…
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ. ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು. ರಕ್ತಹೀನತೆಗೂ ಇದು ರಾಮಬಾಣ. ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ….
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….
‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…