ಸುದ್ದಿ

ಮದುವೆಯ ಮಂಟಪದಲ್ಲಿ ಕುಳಿತಿರುವ ಈ ವರ ತನ್ನ ಮೊಬೈಲ್ ನಲ್ಲಿ ಮಾಡುತ್ತಿರುವುದೇನು ಗೊತ್ತಾ..?ಗೊತ್ತಾದ್ರೆ ಶಾಕ್ ಹಾಕ್ತೀರಾ…

By admin

May 01, 2019

ವಿಶ್ವದಾದ್ಯಂತ ಪಬ್​​ಜಿ ಕ್ರೇಜ್​​ ಎಷ್ಟಿದೆ ಅನ್ನೋದನ್ನ ಮತ್ತೆ ಮತ್ತೆ ಹೇಳಬೇಕಿಲ್ಲ. ಊಟ, ನಿದ್ದೆ ಬಿಟ್ಟು ಪಬ್​​ಜಿ ಆಡೋರು ಇದ್ದಾರೆ. ಹಾಗೇ ಇಲ್ಲೊಬ್ಬ ವರ ತನ್ನ ಮದುವೆಯಲ್ಲಿ ಪಬ್​ಜಿ ಆಡ್ತಾ ಕುಳಿತಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನ ಎಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ. ಮೊದಲಿಗೆ ಟಿಕ್​ಟಾಕ್​ನಲ್ಲಿ ಇದನ್ನು ಹಂಚಿಕೊಳ್ಳಲಾಗಿದ್ದು, ನಂತರ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ವರ ವಧುವಿನ ಪಕ್ಕ ಕುಳಿತಿದ್ದರೂ ಆತನ ಸಂಪೂರ್ಣ ಗಮನ ಗೇಮ್​​ ಆಡುವುದರ ಮೇಲಿದೆ. ಗಿಫ್ಟ್​ ಕೊಟ್ಟರೂ ಆತ ಕೇರ್​ ಮಾಡದೆ ಪಬ್​ಜಿ ಆಡೋದನ್ನ ಮುಂದುವರೆಸಿದ್ದಾನೆ.

ಬೇಕಂತಲೇ ಹೀಗೆ ಮಾಡಿ ವಿಡಿಯೋ ಮಾಡಲಾಗಿದ್ಯಾ ಅಥವಾ ಇದು ನಿಜಕ್ಕೂ ಹೀಗೆ ನಡೆಯಿತಾ ಅನ್ನೋದು ಸ್ಪಷ್ಟವಾಗಿಲ್ಲ. ಆದ್ರೆ ಜನರು ಮಾತ್ರ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ.