ಅಮೆರಿಕದ ಗೊಡಾರ್ಡ್ ನಗರದ ಪ್ರಾಥಮಿಕ ಶಾಲೆಯ ಏಳು ಶಿಕ್ಷಕಿಯರು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಏಳು ಶಿಕ್ಷಕಿಯರು 15 ರಿಂದ 1 ತಿಂಗಳ ಆಸುಪಾಸಿನಲ್ಲಿ ಏಕಕಾಲದಲ್ಲಿ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದಾರೆ.
ಎಲ್ಲಾ ಮಹಿಳಾ ಸಹದ್ಯೋಗಿಗಳು ಏಕಕಾಲದಲ್ಲಿ ತಾಯಿ ಆಗುತ್ತಿದ್ದೇವೆ. ಏಳು ಶಿಕ್ಷಕಿಯರು ಒಂದೇ ಬಾರಿ ಗರ್ಭಿಣಿ ಆಗಬೇಕೆಂಬುವುದು ದೇವರ ಇಚ್ಛೆ. ಶಿಕ್ಷಕಿ ಟಿಫನಿ ಎಂಬವರು ಮೂರನೇ ಬಾರಿ ಗರ್ಭಿಣಿಯಾಗಿದ್ದು, ಅವರಿಗೆ 9 ಮತ್ತು 7 ವರ್ಷದ ಮಕ್ಕಳಿವೆ ಎಂದು ಶಿಕ್ಷಕಿ ಕೈಟಿ ಸಂತಸ ವ್ಯಕ್ತಪಡಿಸುತ್ತಾರೆ.
ನನ್ನ 20 ವರ್ಷದ ಸೇವಾ ಅವಧಿಯಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಶಾಲೆಯ ಏಳು ಶಿಕ್ಷಕಿಯರು ಗರ್ಭಿಣಿ ಎಂಬ ವಿಚಾರ ತಿಳಿದಾಗ ಒಂದು ಬಾರಿ ಶಾಕ್ ಆಯ್ತು. ಮೊದಲಿಗೆ ಆರು ಜನ ಶಿಕ್ಷಕಿಯರ ಗರ್ಭಿಣಿ ಎಂಬ ವಿಷಯ ತಿಳಿದಿತ್ತು. ಏಳನೇ ಶಿಕ್ಷಕಿಯೂ ಗರ್ಭಿಣಿ ಎಂದು ಆಶ್ಚರ್ಯ ಚಕಿಯನಾದೆ.
ಸುದ್ದಿ ಕೇಳಿದಾಗ ಶಿಕ್ಷಕಿಯರು ತಮಾಷೆ ಮಾಡುತ್ತಿದ್ದಾರೆಂದು ಸುಮ್ಮನಾಗಿದ್ದೆ. ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದಾಗ ಖಾತರಿ ಆಯ್ತು. ಅಕ್ಟೋಬರ್ ನಲ್ಲಿ ಇಬ್ಬರು ಶಿಕ್ಷಕಿಯರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಪ್ರಾಂಶುಪಾಲ ಐಶ್ಲೇ ಮಿಲರ್ ಹೇಳಿದ್ದಾರೆ.
ಶಾಲೆಯ ಎಲ್ಲ ಶಿಕ್ಷಕಿಯರು ಗರ್ಭಿಣಿ ಆಗಿರುವ ವಿಷಯ ನಗರದಲೆಲ್ಲ ಹಬ್ಬಿದೆ. ಸ್ಥಳೀಯರು ನಗೆಯ ವಿಷಯದಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಶಾಲೆಯಲ್ಲಿನ ನೀರಿನ ಮಹಿಮೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಎಂಟು ಮಕ್ಕಳು ಜನಿಸಲಿವೆ. ನಾಲ್ಕನೇ ತರಗತಿ ಶಿಕ್ಷಕಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.