ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ, ಆದರೆ ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ ಮತ್ತು ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ಭೂಮಿಯ ಮೇಲೆ ಹಲವು ರೀತಿಯ ಹಣ್ಣುಗಳಿವೆ ಮತ್ತು ಒಂದೊಂದು ಹಣ್ಣು ಕೂಡ ಒಂದೊಂದು ರೀತಿಯ ಗುಣಲಕ್ಷಣಗಳನ್ನ ಹೊಂದಿರುತ್ತದೆ, ಇನ್ನು ಹಣ್ಣುಗಳನ್ನು ತಿನ್ನಲೂ ಕ್ರಮವಿದೆ, ಹಾಗಾದರೆ ಹಣ್ಣುಗಳನ್ನ ತಿನ್ನುವಾಗ ಅನುಸರಿಸಬೇಕಾದ ಕ್ರಮಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.
ಊಟ ಅಥವಾ ತಿಂಡಿ ತಿನ್ನುವ ಅರ್ಧಗಂಟೆಯ ಮೊದಲು ಹಣ್ಣು ತಿನ್ನಬೇಕು ಮತ್ತು ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನಬಾರದು, ಹೌದು ಸ್ನೇಹಿತರೆ ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು, ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನೇ ತಿನ್ನುವುದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ.
ದಾಳಿಂಬೆಯಲ್ಲಿ ವಿಟಮಿನ್ ಬಿ, ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಸಮೃದ್ಧವಾಗಿದೆ, ಇಷ್ಟೇ ಅಲ್ಲದೆ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್, ಸೆಲೆನಿಯಮ್, ರಂಜಕ, ಮ್ಯಾಂಗನೀಸ್ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಆದ್ದರಿಂದ ದಾಳಿಂಬೆ ಹಣ್ಣಿನ ಜ್ಯೂಸ್ ಗಿಂತ ಇಡೀ ಹಣ್ಣನ್ನು ತಿನ್ನುವ ಅಭ್ಯಾಸ ಬಹಳ ಒಳ್ಳೆಯದು. ಇನ್ನು ದಾಳಿಂಬೆ ಹಣ್ಣು ದೇಹದಲ್ಲಿ ರಕ್ತದ ಪ್ರಮಾಣವನ್ನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ದೇಹದಲ್ಲಿ ರಕ್ತ ಕಡಿಮೆ ಇರುವವರು ಈ ಹಣ್ಣನ್ನ ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಇನ್ನು ದಾಳಿಂಬೆ ಹಣ್ಣನ್ನು ತಿನ್ನುವ 99% ಜನರಿಗೆ ಇದರಿಂದ ಎಷ್ಟು ಪ್ರಯೋಜನ ಎನ್ನುವ ವಿಷಯವೇ ತಿಳಿದಿರುವುದಿಲ್ಲ, ಹಾಗಾದರೆ ದಾಳಿಂಬೆ ಹಣ್ಣಿನ ಮಹತ್ವದ ಬಗ್ಗೆ ಪೂರ್ತಿಯಾದ ಮಾಹಿತಿ ಇಲ್ಲಿದೆ ಓದಿ. ದಾಳಿಂಬೆ ಹಣ್ಣು ತಿನ್ನುವುದು ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ ಎಂದು ವಿಜ್ಞಾನವೇ ಹೇಳಿದೆ, ಹಾಡು ದಾಳಿಂಬೆ ಹಣ್ಣು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ ಎನ್ನಲಾಗುತ್ತದೆ ಆದರೆ ಇದು ಸಂಪೂರ್ಣ ಸುಳ್ಳು. ಹಣ್ಣುಗಳು ವಿಧ ವಿಧದ ಪೋಷಕಾಂಶಗಳಿಂದ ತುಂಬಿದ್ದು ನಿಮ್ಮ ಆರೋಗ್ಯಕ್ಕೆ ಸಹಕಾರಿ, ಹೆಚ್ಚಿನ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಹೊಂದಿರುತ್ತದೆ ಆದರೆ ಅವುಗಳಲ್ಲಿ ಹಲವು ಹಣ್ಣುಗಳು ಮಧುಮೇಹಿಗಳಿಗೆ ಅಪಾಯಕಾರಿಯಲ್ಲ. ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಕಡಿಮೆ ಆಗಿ ಮೂತ್ರಪಿಂಡದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಲ್ಲಿ ಸಹಕರಿಸುತ್ತದೆ ಅಲ್ಲದೆ ದಾಳಿಂಬೆ ಹಣ್ಣು ಸೇವನೆಯಿಂದ ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ.