ಕೆಲವು ಸಮಯಗಳ ಹಿಂದೆ ರಾತ್ರಿ ಸುಮಾರು 10 ಘಂಟೆ ಸುಮಾರಿಗೆ ನೈಟ್ ಡ್ಯೂಟಿ ಮಾಡುವ ಸಲುವಾಗಿ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ಸಿಂಗಲ್ ಬಳಿ ಬಂದರು, ಇನ್ನು ಈ ಸಮಯದಲ್ಲಿ 11 ವರ್ಷದ ಒಬ್ಬ ಹುಡುಗ ಅಳುತ್ತ ರೋಡ ನಲ್ಲಿ ತಿರುಗಾಡುತ್ತಿದ್ದ. ಹಾಗಾದರೆ ಆ ಹುಡುಗ ಅಲ್ಲಿ ಯಾಕೆ ತಿರುಗಾಡುತ್ತಿದ್ದ ಮತ್ತು ಆತನಿಗೆ ಆದ ತೊಂದರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇದನ್ನ ನೋಡಿದ ಪೊಲೀಸ್ ಅಧಿಕಾರಿ ನಾಗಮಲ್ಲು ಆ ಹುಡುಗನ ಬಳಿ ಹೋಗಿ ಏನಾಯಿತು ಎಂದು ಕೇಳಿದರು, ಇನ್ನು ಅದಕ್ಕೆ ಉತ್ತರಿಸಿದ ಆ ಹುಡುಗ ತನ್ನ ಅಜ್ಜಿ ಇಲ್ಲಿ ಹೂವಿನ ವ್ಯಾಪಾರವನ್ನ ಮಾಡುತ್ತಿದ್ದು ನಾವು ಅವರನ್ನ ನೋಡಲು ಬಂದೆ, ಆದರೆ ಅವರು ಯಾರು ಇಲ್ಲಿ ಕಾಣಿಸುತ್ತಿಲ್ಲ ಮತ್ತು ಅವರು ಎಲ್ಲೋ ಹೋಗಿದ್ದಾರೆ ಎಂದು ಹೇಳಿದನು ಆ ಬಾಲಕ.
ಆ ಬಾಲಕನ ಬಳಿ ನಿನ್ನ ಹೆಸರು ಏನು ಎಂದು ಕೇಳಿದಾಗ ಆ ಬಾಲಕ ನನ್ನ ಹೆಸರು ನಾನಿ ಮತ್ತು ನಾನು ವಿನಕೊಂಡ ಅನಾಥ ಆಶ್ರಮದಲ್ಲಿ ಆರನೇ ತರಗತಿ ಓದುತ್ತಿದ್ದೇನೆ, ನನ್ನ ತಾಯಿ ಬಾವಿಯಲ್ಲಿ ಬಿದ್ದು ಸತ್ತು ಹೋದರು ಮತ್ತು ನನ್ನ ತಂದೆ ಕುಡಿತದಿಂದ ಪ್ರಾಣವನ್ನ ಬಿಟ್ಟರು ಎಂದು ಹೇಳಿದ ಆ ಹುಡುಗ ನಾನು ಇಲ್ಲಿ ಅಜ್ಜಿಯನ್ನ ನೋಡಲು ಬಂದೆ ಆದರೆ ಅವರು ಇಲ್ಲಿ ಕಾಣಿಸುತ್ತಿಲ್ಲ ಮತ್ತು ಈಗ ಊರಿಗೆ ವಾಪಾಸ್ ಹೋಗಲು ಎಲ್ಲಿ ಬಸ್ ಹತ್ತಬೇಕು ಎಂದು ತಿಳಿಯುತ್ತಿಲ್ಲ ಎಂದು ಹೇಳಿ ಅಳಲು ಶುರು ಮಾಡಿದ. ಇನ್ನು ಇದನ್ನ ಕೇಳಿದ ಪೊಲೀಸ್ ಅಧಿಕಾರಿ ಭಯಪಡಬೇಡ ನಾನು ನಿನ್ನನ್ನ ಬಸ್ ಹತ್ತಿಸುತ್ತೇನೆ ಮತ್ತು ಈ ಹಣವನ್ನ ನಿನ್ನ ಬಳಿ ಇಟ್ಟುಕೋ ಎಂದು ಒಂದಷ್ಟು ಹಣವನ್ನ ಆ ಹುಡುಗನಿಗೆ ಕೊಟ್ಟರು.
ನಾಗಮಲ್ಲು ಅವರ ಹಣವನ್ನ ಅತೆಗೆದುಕೊಳ್ಳದ ಆ ಹುಡುಗ ನನ್ನ ಬಳಿ 320 ರೂಪಾಯಿ ಹಣ ಇದೆ ಮತ್ತು ನಾನು ಊರಿಗೆ ಹೋಗಲು ಈ ಹಣ ಸಾಕು ನಿನ್ನ ಹಣ ನನಗೆ ಬೇಡ ಅಂದನು, ಬೆಳಿಗ್ಗೆ ಇಂದ ಏನಾದರು ತಿಂದಿದ್ದೀಯಾ ಎಂದು ಕೇಳಿದಾಗ ಇಲ್ಲ ಸರ್ ಏನು ತಿಂದಿಲ್ಲ ಮತ್ತು ಏನಾದರು ತಿಂದರೆ ನನ್ನ ಕೈಯಲ್ಲಿ ಇರುವ ಹಣ ನನಗೆ ಊರಿಗೆ ಹಣ ಸಾಕಾಗಲ್ಲ ಎಂದು ಎಂದು ಹೇಳಿದನು ಆ ಹುಡುಗ. ಆ ಹುಡುಗನ ನಿಯತ್ತನ್ನ ನೋಡಿ ನಾಗಮಲ್ಲು ಅವರಿಗೆ ತುಂಬಾ ಸಂತೋಷವಾಯಿತು, ತಕ್ಷಣ ಆ ಹುಡುಗನನ್ನ ಪಕ್ಕದ ಹೋಟೆಲ್ ಗೆ ಕರೆದುಕೊಂಡ ಹೋದ ನಾಗಮಲ್ಲು ಹೊಟ್ಟೆ ತುಂಬಾ ಊಟ ಕೊಡಿಸಿ ಆತನಿಗೆ 2000 ಕೊಟ್ಟು ಬಟ್ಟೆ ಪುಸ್ತಕವನ್ನ ಕೊಂಡುಕೊಳ್ಳುವಂತೆ ಹೇಳಿದರು.
ಇನ್ನು ತನ್ನ ಮೊಬೈಲ್ ನಂಬರ್ ನ್ನ ಆ ಹುಡುಗನಿಗೆ ಕೊಟ್ಟ ಪೊಲೀಸ್ ಅಧಿಕಾರಿ ನಾಗಮಲ್ಲು ಅವರು ನಿನಗೆ ಏನಾದರು ಸಹಾಯ ಬೇಕು ಅಂದರೆ ನನಗೆ ಕರೆ ಮಾಡು ಎಂದು ಹೇಳಿದರು. ನಾಗಮಲ್ಲು ಅವರು ತನ್ನನ್ನ ನೋಡಿಕೊಂಡ ರೀತಿಯನ್ನ ನೋಡಿ ಆ ಹುಡುಗನ ಕಣ್ಣಲ್ಲಿ ನೀರು ಬಂತು, ತನ್ನ ವಾಹನದಲ್ಲಿ ಆ ಹುಡುಗನನ್ನ ಬಸ್ ಸ್ಟಾಂಡ್ ಗೆ ಕರೆದುಕೊಂಡು ಆ ಹುಡುಗನನ್ನ ಬಸ್ ಹರಿಸಿದರು ಪೊಲೀಸ್ ಅಧಿಕಾರಿ ನಾಗಮಲ್ಲು. ಹುಡುಗನನ್ನ ಬಸ್ ಹತ್ತಿಸಿದಾಗ ಆತ ನನಗೆ ಹೇಳಿದ ಟಾಟಾ ವಿಧಾನ ನನಗೆ ಇನ್ನು ಕಾಡುತ್ತಿದೆ ಎಂದು ನಾಗಮಲ್ಲು ಅವರು ಹೇಳಿದ್ದಾರೆ, ಸ್ನೇಹಿತರೆ ಆ ಹುಡುಗನ ನಿಯತ್ತು ಮತ್ತು ಪೊಲೀಸ್ ಅಧಿಕಾರಿ ನಾಗಮಲ್ಲು ಅವರ ಹೃದಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.