ಕಾನೂನು

ಪೋಕ್ಸೊ ಕಾಯಿದೆ ಅಡಿ 4 ಆರೋಪಿಗೆ ಜೀವಿತಾವಧಿವರೆಗೂ ಸಜೆ

By KOLAR NEWS CHANDRU

February 18, 2023

ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಕಾಮಸಮುದ್ರಂ ಪೋಲೀಸ್ ಠಾಣಾಧಿಕಾರಿ ಸಿ.ಆರ್. 19/2022 ರಂತೆ ಕಲಂ 363, 376 (ಡಿಎ), 376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕ್ಸ್ ಕಾಯ್ದೆ ರೀತಿ ಪರ‍್ಯಾದಿ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡು ಜೆ. ಎನ್. ಆನಂದ್ ಕುಮಾರ್, ವೃತ್ತ ನಿರೀಕ್ಷಕರು, ಕಾಮಸಮುದ್ರಂ ವೃತ್ತ ರವರು ಆರೋಪಿತರ ವಿರುದ್ಧ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.

A1  ANAND                                                 A2  KANTHARAJ

A3    PRAVEEN                                              A4  VENU ಸ್ಪೆಷಲ್ ಸಿ. (ಪೋಕ್ಸ್) 36/2022 ರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ಪಿ. ದೇವಮಾನೆ ಯವರು ವಿಚಾರಣೆ ನಡೆಸಿದ್ದು, ಸದರಿ ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿತರಾದ ಎ1 ಆನಂದ್, ಎ2 ಕಾಂತ್‌ರಾಜ್, ಎ3 ಪ್ರವೀಣ್ ಮತ್ತು ಎ4 ವೇಣು ರವರ ವಿರುದ್ಧ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ದಿನಾಂಕ 17-02-2023 ರಂದು ಆರೋಪಿತರಿಗೆ ಕಲಂ 363, 376 (ಡಿಎ), 376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕೋ ಕಾಯ್ದೆ ಆಡಿಯಲ್ಲಿ ಜೀವಿತಾವಧಿವರೆಗೂ ಸಜೆ, ಜೊತೆಗೆ ತಲಾ ರೂ. 25,000/- ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆಯನ್ನು ವಿಧಿಸಿ, ತೀರ್ಪು ಪ್ರಕಟಿಸಿದೆ. ಸದರೀ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಡಿ. ಲಲಿತಕುಮಾರಿ ರವರು ವಾದ ಮಂಡಿಸಿದ್ದರು.