ಉಪಯುಕ್ತ ಮಾಹಿತಿ

ಸಿಗರೇಟ್ ಸೇದಿ ಬಿಸಾಕಿದ ಪೀಸ್ ಗಳಿಂದ ಕೋಟಿ ಕೋಟಿ ಗಳಿಸಿದ ಯುವಕರು, ನೀವು ಕೂಡ ಮಾಡಬಹುದು.

By admin

January 14, 2020

ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕಮ್ಮಿ ಇಲ್ಲ, ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಸಿಗರೇಟ್ ಸೇದುತ್ತಾರೆ, ಇನ್ನು ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರು ಮಾತ್ರ ಸಿಗರ್ಟ್ ಸೇದುತ್ತಿದ್ದರು ಆದರೆ ಈಗ ಶಾಲೆಗೆ ಹೋಗುವ ಮಕ್ಕಳು ಕೂಡ ಸಿಗರೇಟ್ ಗಳನ್ನ ಸೇದುತ್ತಿದ್ದಾರೆ ಮತ್ತು ಅದನ್ನ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 31 ಲಕ್ಷ ಸಿಗರೇಟ್ ಸೇದುತ್ತಿದ್ದಾರೆ ಜನರು, ಇನ್ನು ಜನರು ಸಿಗರೇಟ್ ಸೇದಿದ ಮೇಲೆ ಅದರ ತುದಿಯನ್ನ ಎಸೆಯುತ್ತಾರೆ ಮತ್ತು ಇನ್ನು ಕೆಲವರು ಅದನ್ನ ಕಾಲಿನ ಕೆಳಗೆ ಹಾಕಿ ತುಳಿಯುತ್ತಾರೆ. ಸ್ನೇಹಿತರೆ ನಾವು ಹೇಳುವ ಇವರು ಬಿಸಾಕಿದ ಸಿಗರೇಟ್ ತುದಿಗಳಿಂದ ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತ್ತಿದ್ದಾರೆ.

ಗುರ್ಕಾಗೆ ಸೇರಿದ ವಿಶಾಲ್ ಮತ್ತು ನಮನ್ ಗುಪ್ತ ಒಂದು ಭಾರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಲು ಹೋಗಿದ್ದರು ಮತ್ತು ಆ ಸಮಯದಲ್ಲಿ ಅಲ್ಲಿ ಬಿದ್ದಿದ್ದ ಸಾವಿರಾರು ಸೇದು ಬಿಸಾಕಿದ ಸಿಗರೇಟ್ ತುದಿಗಳನ್ನ ನೋಡಿ ಇಬ್ಬರು ಶಾಕ್ ಆದರು. ಈ ಒಂದು ಸ್ಥಳದಲ್ಲೇ ಇಷ್ಟು ಸಿಗರೇಟ್ ತುದಿಗಳು ಇದ್ದರೆ ಪ್ರಪಂಚದಲ್ಲಿ ಇನ್ನೆಷ್ಟು ಇರಬಹುದು ಎಂದು ಭಾವಿಸಿಕೊಂಡ ವಿಶಾಲ್ ಮತ್ತು ನಮನ್ ಗೆ ಒಂದು ಆಲೋಚನೆ ಬರುತ್ತದೆ. ಹೌದು ಸೇದು ಬಿಸಾಕಿದ ಸಿಗರೇಟ್ ಫಿಲ್ಟರ್ ಗಳನ್ನ ರಿಸೈಕಲ್ ಮಾಡಿದರೆ ಹೇಗೆ ಅನ್ನುವ ಆಲೋಚನೆ ಇಬ್ಬರಿಗೆ ಬರುತ್ತದೆ, ಹೀಗೆ ಸ್ವಲ್ಪ ಸಮಯದ ನಂತರ ಕೋಡ್ ಅನ್ನುವ ಕಂಪೆನಿಯನ್ನ ಆರಂಭ ಮಾಡುತ್ತಾರೆ ವಿಶಾಲ್ ಮತ್ತು ನಮನ್.

ಸೇದು ಬಿಸಾಕಿದ ಸಿಗರೇಟ್ ಫಿಲ್ಟರ್ ಗಳನ್ನ ರಿಸೈಕಲ್ ಮಾಡುವುದೇ ಈ ಕಂಪನಿಯ ಕೆಲಸ, ಆದರೆ ಅಷ್ಟು ಮೊತ್ತ ಸಿಗರೇಟ್ ಫಿಲ್ಟರ್ ಗಳನ್ನ ಹೇಗೆ ಒಟ್ಟುಗೂಡಿಸುವುದು ಅನ್ನುವುದು ಅವರಿಗೆ ದೊಡ್ಡ ಸವಾಲಾಗುತ್ತದೆ. ಇನ್ನು ಸಮಯದಲ್ಲಿ ಇನ್ನೊಂದು ಉಪಾಯ ಮಾಡಿದ ಇವರು ಯಾರು ಅದನ್ನ ಶೇಖರಣೆ ಮಾಡಿ ಕೊಡುತ್ತಾರೆ ಅವರಿಗೆ ಒಂದು ಕೆಜಿ ಗೆ ಇಂತಿಷ್ಟು ಹಣ ಕೊಡುತ್ತೇವೆ ಎಂದು ಘೋಷಣೆ ಮಾಡಿದರು ವಿಶಾಲ್ ಮತ್ತು ನಮನ್. ಇನ್ನು ಆಸಕ್ತಿ ಇರುವವರ ಮನೆಯ ಬಳಿ ಒಂದು ಬಾಕ್ಸ್ ಇಡಲು ಶುರು ಮಾಡಿದರು, ಇನ್ನು ಒಂದು ಕೆಜಿ ಸಿಗರೇಟ್ ಫಿಲ್ಟರ್ ಗಳನ್ನ ಶೇಖರಣೆ ಮಾಡಿಕೊಟ್ಟರೆ 700 ರೂಪಾಯಿಗಳನ್ನ ಕೊಡಲಾಗುತ್ತದೆ ಮತ್ತು ಇದನ್ನ ಕೇಳಿದ ಕೆಲವು ಸಿಗರೇಟ್ ಸೇದುವವರು ತಾವೇ ಶೇಖರಣೆ ಮಾಡಲು ಶುರು ಮಾಡಿದರು.

ಈಗ ತಮ್ಮ ಕಂಪನಿಯನ್ನ 20 ರಾಜ್ಯಗಳಲ್ಲಿ ವಿಸ್ತರಣೆ ಮಾಡಿರುವ ವಿಶಾಲ್ ಮತ್ತು ನಮನ್ 10 ಸಾವಿರ ಸ್ಥಳಗಳಲ್ಲಿ ಸಿಗರೇಟ್ ಫಿಲ್ಟರ್ ಶೇಖರಣೆಯ ಬಾಕ್ಸ್ ಇಟ್ಟಿದ್ದಾರೆ, ಇನ್ನು ಶೇಖರಣೆ ಆದ ಸಿಗರೇಟ್ ಪೀಸ್ ಗಳನ್ನ ರಿಸೈಕಲ್ ಮಾಡುವ ಇವರು ಅದರಲ್ಲಿನ ಪೇಪರ್ ಗಳನ್ನ ಗಿಡಗಳಿಗೆ ಆರ್ಗಾನಿಕ್ ಬೋಡೇರ್ ಆಗಿ ಮತ್ತು ಫಿಲ್ಟರ್ ನಲ್ಲಿ ಇರುವ ಪಾಲಿಮರ್ ನ್ನ ಟಾಯ್ಸ್, ಕೀ ಚೈನ್ ಮತ್ತು ದಿಂಬುಗಳನ್ನ ತಯಾರು ಮಾಡಲು ಬಳಸುತ್ತಿದ್ದಾರೆ. ತಮ್ಮ ವಿನೂತನ ಮೂಲಕ ಆಲೋಚನೆಯಿಂದ ಸಾವಿರಾರು ಜನರ ಕೈಗೆ ಒಂದಿಷ್ಟು ಹಣ ಸಿಗುವಂತೆ ಮಾಡುತ್ತಿರುವ ಮತ್ತು ಪರಿಸರ ಸಂರಕ್ಷಣೆ ಮಾಡುತ್ತಿರುವ ವಿಶಾಲ್ ಮತ್ತು ನಮನ್ ಅವರ ಕೆಲಸಕ್ಕೆ ನಾವು ಮೆಚ್ಚಲೇಬೇಕು.