ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ ಮನೆಗೆ ತರುತ್ತಾನೆ. ಇನ್ನು ಮನೆಗೆ ಆ ಹಂದಿಯನ್ನ ತಂದು ಕಡಿದು ಕ್ಲೀನ್ ಮಾಡುವಾಗ ಆತನಿಗೆ ಏನೋ ಒಂದು ವಸ್ತು ಸಿಗುತ್ತದೆ, ಆ ವಸ್ತು ಏನು ಎಂದು ತಿಳಿಯದ ಆತ ಅದನ್ನ ತೊಳೆದು ಮನೆಯಲ್ಲಿ ಇಡುತ್ತಾನೆ.
ಇನ್ನು ಊರಿನ ಜಾತ್ರೆ ಮುಗಿದು ಮೂರೂ ನಾಲ್ಕು ದಿನಗಳು ಕಳೆದ ನಂತರ ಆ ವಸ್ತುವನ್ನ ಹತ್ತಿರದ ಟೆಸ್ಟಿಂಗ್ ಅಧಿಕಾರಿಯ ಬಳಿ ತಗೆದುಕೊಂಡು ಹೋಗಿ ಪರಿಶೀಲನೆಗಾಗಿ ಕೊಡುತ್ತಾನೆ ಮತ್ತು ಈ ವಸ್ತು ಏನು ಹಾಗೆ ಅದರ ಬೆಲೆ ಎಷ್ಟು ಎಂದು ಅಧಿಕಾರಿಯನ್ನ ಪ್ರಶ್ನೆ ಮಾಡಿದ್ದಾನೆ ಉಹಾನ್. ಇನ್ನು ಇಲ್ಲಿಯ ತನಕ ಉಹಾನ್ ನೂರು ರೀತಿಯ ವಿಧ ವಿಧವಾದ ಪ್ರಾಣಿಗಳನ್ನ ಮತ್ತು ಹಂದಿಯನ್ನ ಬೇಟೆಯಾಡಿದ್ದನು, ಆದರೆ ಯಾವತ್ತೂ ಇಂತಹ ವಸ್ತುಗಳನ್ನ ಆತ ನೋಡಿರಲಿಲ್ಲ, ಈ ಕಾರಣಕ್ಕೆ ಉಹಾನ್ ಈ ವಸ್ತು ಏನು ಮತ್ತು ಇದರ ಬೆಲೆ ಎಷ್ಟು ಎಂದು ಅಧಿಕಾರಿಯ ಬಳಿ ಕೇಳಿದ್ದಾನೆ. ಇನ್ನು ಇದನ್ನ ಪರಿಶೀಲನೆ ಮಾಡಿದ ಆ ಅಧಿಕಾರಿ ಇದು ತುಂಬಾ ಬೆಲೆಬಾಳುವ ವಸ್ತು ಮತ್ತು ಇದನ್ನ ಕ್ಯಾನ್ಸರ್ ಮತ್ತು ಮೆದುಳಿನ ಚಿಕಿತ್ಸೆಗೆ ಔಷಧಿಯಾಗಿ ಉಪಯೋಗ ಮಾಡಲಾಗುವುದು ಮತ್ತು ಇಂತಹ ವಸ್ತುವಿನ ಒಂದರ ಬೆಲೆ 40 ರಿಂದ 50 ಲಕ್ಷ ಆಗುತ್ತದೆ ಎಂದು ಆ ಅಧಿಕಾರಿ ಉಹಾನ್ ಗೆ ಹೇಳುತ್ತಾರೆ.
ಇನ್ನು ಇಂತಹ ವಸ್ತು ಸಿಗುವುದು ಬಹಳ ಅಪರೂಪ ಮತ್ತು ಉಹಾನ್ ಗೆ ಇಂತಹ ಮೂರು ವಸ್ತುಗಳು ಹಂದಿಯ ಹೊಟ್ಟೆಯಲ್ಲಿ ಸಿಕ್ಕ ಕಾರಣ ಸುಮಾರು 3 ಕೋಟಿ ರೂಪಾಯಿ ತನಕ ಉಹಾನ್ ಗೆ ಹಣ ಸಿಕ್ಕಿತು. ಇನ್ನು ಇಂತಹ ವಸ್ತುಗಳು ಕೆಲವೇ ಕೆಲವು ಪ್ರಾಣಿಗಳ ಹೊಟ್ಟೆಯಲ್ಲಿ ಬಹಳ ಸೂಕ್ಷ್ಮವಾಗಿ ಸಿಗುತ್ತದೆ, ಇನ್ನು ನೀವು ಕೇಳಿರಬಹುದು ಹಾವುಗಳ ಚರ್ಮ, ಮೊಸಳೆಗಳ ಚರ್ಮದಿಂದ ಬ್ಯಾಗ್ ಮತ್ತು ಬೆಲೆಬಾಳುವ ಲೆದರ್ ವಸ್ತುಗಳನ್ನ ತಯಾರು ಮಾಡಲಾಗುತ್ತದೆ ಮತ್ತು ಅದೇ ರೀತಿಯಾಗಿ ಕೆಲವು ಪ್ರಾಣಿಗಳಲ್ಲಿ ಸಿಗುವ ಅಂಶಗಳು ಔಷಧಿಗಳಿಗೆ ಉಪಯೋಗ ಆಗುತ್ತದೆ. ಸ್ನೇಹಿತರೆ ಉಹಾನ್ ಗೆ ಸಿಕ್ಕ ಈ ವಸ್ತುವಿನಿಂದ ಆತ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ.