Health

ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಸುಖ ನಿದ್ದೆಗೆ ತೊಂದರೆಯಾಗದಂತೆ ತಡೆಯುವುದು ಹೇಗೆ? ಇದನ್ನೊಮ್ಮೆ ಓದಿ..

By admin

November 02, 2019

ಹಗಲಿಡಿ ಸ್ಮಾರ್ಟ್‌ ಫೋನ್‌ ಬಳಸಿ ಮತ್ತು ರಾತ್ರಿ ಹೊತ್ತು ಮಲಗುವ ಮುಂಚೆಯೂ ಸ್ಮಾರ್ಟ್‌ ಫೋನ್‌ ಬಳಸುವುದರಿಂದ ನಿಮ್ಮ ಸುಖ ನಿದ್ದೆಗೆ ಭಂಗ ಖಂಡಿತ ಬರುತ್ತದೆ. ನಮ್ಮ ಜೀವನ ಶೈಲಿಯೇ ಹಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಅತ್ಯುತ್ತಮವಾದ ನಿದ್ದೆ ಬೇಕು. ಆದರೆ,ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ ಕೂಡ ಬದಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 9 ಗಂಟೆಯಾದರೂ ನಿದ್ರೆ ಮಾಡಬೇಕು. 

ಕೆಲಸ ಮಾಡುವಾಗ ನಾವು ಬಹುತೇಕ ಸಮಯವನ್ನು ಕಂಪ್ಯೂಟರ್‌ ಸ್ಕ್ರೀನ್‌ ನೋಡಿಕೊಂಡೇ ಇರುತ್ತೇವೆ ಮತ್ತು ಕೆಲಸ ಇಲ್ಲದಿದ್ದಾಗ ಮೊಬೈಲ್‌ ಫೋನ್‌ಗಳಲ್ಲಿ ನಿರತರಾಗಿರುತ್ತೇವೆ. ಅಂದರೆ, ನಮ್ಮ ಕಣ್ಣು ಸದಾಯಾವುದಾರೂ ಒಂದು ಸ್ಕ್ರೀನ್‌ ಮೇಲೆ ಇದ್ದೇ ಇರುತ್ತದೆ. ಈ ರೀತಿಯಾಗಿ ನಿರಂತರವಾಗಿ ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ಗಳನ್ನು ನೋಡುವುದರಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ವೈರ್‌ಲೆಸ್‌ ಸ್ಪೀಕರ್‌ಗೆ ಹೊಂದಿಸಿ ಮತ್ತು ಸಾಫ್ಟ್‌ ಮ್ಯೂಸಿಕ್‌ ಅನ್ನು ಪ್ಲೇ ಮಾಡಿ. ಅಂದರೆ, ಮಳೆ, ಗುಡುಗು, ತಂಗಾಳಿಯಂಥ ಧ್ವನಿಯನ್ನು ಒಳಗೊಂಡ ಸ್ವಾಭಾವಿಕ ಸಂಗೀತವಿರಲಿ. ಅಲ್ಲದೇ ಮಲಗುವ ಒಂದು ಗಂಟೆ ಮುಂಚೆ ನೀವು ಸ್ಲೀಪ್‌ ಮ್ಯೂಸಿಕ್‌ ಆನ್‌ ಮಾಡಬಹುದು ಅಥವಾ ಯುಟೂಬ್‌ನಲ್ಲಿ ದೊರೆಯುವ ಸಾಫ್ಟ್‌ ಮ್ಯೂಸಿಕ್‌ ಕೂಡ ಪ್ಲೇ ಮಾಡಬಹುದು. ಇದಕ್ಕೆ ಪರ್ಯಾಯವಾಗಿ ಉತ್ತಮ ನಿದ್ರೆಗಾಗಿ ಆಡಿಯೊಬುಕ್‌ ಅಥವಾ ನಿಮಗೆ ಇಷ್ಟವಾದ, ನಿದ್ರೆ ಬರಿಸುವ ಪಾಡ್‌ಕಾಸ್ಟ್‌ ಕೂಡ ಕೇಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ಮಲಗುವಾಗ ನಿಮ್ಮ ಫೋನ್‌ಅನ್ನು ಹತ್ತಿರ ಇಟ್ಟುಕೊಳ್ಳಬೇಡಿ. ಮಲಗುವ ಒಂದು ಗಂಟೆ ಮುಂಚೆ ನಿಮ್ಮಫೋನ್‌ ಅನ್ನು ಸೈಲೆಂಟ್‌ ಮೋಡ್‌ಗೆ ಹಾಕಿ ಅದನ್ನು ಇನ್ನೊಂದು ರೂಮ್‌ನಲ್ಲಿಡಿ ಅಥವಾ ಡ್ರಾಯರ್‌ನಲ್ಲಿ ಇಟ್ಟು ಬಿಡಿ. ಮಲಗುವ ಮುಂಚೆ ನಿಮ್ಮ ಫೋನ್‌ ಆನ್‌ನಲ್ಲಿಡುವುದರಿಂದ ಅನಗತ್ಯ ಒತ್ತಡ ಹೆಚ್ಚಾಗಲು ಕಾರಣವಾಗುತ್ತದಲ್ಲದೇ ನಿದ್ರೆಯೂ ವಿಳಂಬವಾಗುತ್ತದೆ. ನಿದ್ದೆಗೆ ಹೋಗುವ ಮುಂಚೆ ಸಂಪೂರ್ಣವಾಗಿ ಒಂದು ಗಂಟೆ ಕಾಲ ನೀವು ಸ್ಮಾರ್ಟ್‌ಫೋನ್‌ನಿಂದ ದೂರ ಇದ್ದಿದ್ದಾದರೆ ಅತ್ಯುತ್ತಮವಾದ ನಿದ್ರೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದು ನಿದ್ರಾ ಭಂಗಕ್ಕೆ ಕಾರಣವಾಗುತ್ತದೆ.