ಹಲವಾರು ವಾರಗಳ ಹಿಂದೆ ತೈಲ ಬೆಳೆಗಳ ದರ ಏಳ ಎಗ್ಗಿಲ್ಲದೆ ಏರುತ್ತಲೇ ಇತ್ತು. ಈಗ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಇಳಿಕೆಯಗುತ್ತಿದೆ.ಭಾನುವಾರವಷ್ಟೇ 20 ಪೈಸೆ ಯಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಇಲ್ಲಿಯವರೆಗೆ 7 ರುಪಾಯಿ 29 ಪೈಸೆ ಕಡಿಮೆಯಾಗಿದೆ.ಇದು ಆಗಸ್ಟ್ ೧೬ಕ್ಕೆ ಇದ್ದ ದರಕ್ಕೆ ಈಗ ತಲುಪಿದೆ.
ಇದರ ಜೊತೆಗೆ ಡೀಸೆಲ್ ಬೆಲೆ ಕೂಡ ಲೀಟರ್ಗೆ 18 ಪೈಸೆ ಕಡಿಮೆಯಾಗಿದ್ದು 29 ದಿನಗಳಲ್ಲಿ ೩ರುಪಾಯಿ ೮೯ ಪೈಸೆ ಕಡಿಮೆಯಾಗಿದೆ. ಆಗಸ್ಟ್ ೧೫ಕ್ಕೆ ಹೋಲಿಸಿದ್ದಲ್ಲಿ ಆಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲಿಟರ್ ಗೆ 77.14 ಇತ್ತು. ಮತ್ತು ಮುಂಬೈನಲ್ಲಿ 84.58ರುಪಾಯಿ ಬೆಲೆ ಇತ್ತು.ಆಗಸ್ಟ್ ೧೬ರ ನಂತರ ದಿನಾಲು ಏರಿಕೆ ಆಗುತ್ತಲೇ ಇತ್ತು.ಅಕ್ಟೋಬರ್ ೪ರ ಹೊತ್ತಿಗೆ ಮುಂಬೈನಲ್ಲಿ 91.34ರೂಪಾಯಿಗಳ ವರೆಗೆ ಗರಿಷ್ಟ ಬೆಲೆ ತಲುಪಿತ್ತು.
ಆಗ ಎಲ್ಲೆಡೆ ಕೇಂದ್ರಸರ್ಕಾರದ ವಿರ್ರುದ್ದ ಆಕ್ರೋಶ ವ್ಯಕ್ತವಾಗಿತ್ತು. ನಂತರ ಮೋದಿ ಸರ್ಕಾರ 1.50ರಷ್ಟು ಅಬಕಾರಿ ಸುಂಕವನ್ನು ಇಳಿಸಿತ್ತು.ಜೊತೆಗೆ 1 ರೂ.ಕಮಿಷನ್ ಕಡಿಮೆ ಮಾಡಿತ್ತು.ತೈಲ ಕಂಪನಿಗಳಿಗೂ ಕೂಡ 2.50 ಕಡಿಮೆ ಮಾಡುವಂತೆ ಸೂಚನೆ ಕೊಟ್ಟಿತ್ತು.ಇದರ ಜೊತೆಗೆ ವ್ಯಾಟ್ ಕಡಿಮೆಮಾದುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು ಆದೇಶ ಕೂಡ ಮಾಡಿತ್ತು.
ತದನಂತರ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 72.95 ಮತ್ತು 77.45ಕ್ಕೆ ದರಗಳು ಇಳಿಕೆ ಕಂಡಿದ್ದವು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದ್ದರಿಂದ ಭಾರತದಲ್ಲೂ ಸಹ ಏರಿಕೆ ಕಂಡಿತ್ತು. ಈಗ ದಿನದಿಂದ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಕಡಿಮೆಯಾಗುತ್ತಲೇ ಇದ್ದು, ಇದು ಜನರಲ್ಲಿ ಮಂದಹಾಸ ಮೂಡುವಂತಾಗಿದೆ.