ಶ್ರೀಕೃಷ್ಣನು ಸ್ವರ್ಗದಿಂದ ತಂದ ಪಾರಿಜಾತ ವೃಕ್ಷದ ಬಗ್ಗೆ ತಿಳಿಯದವರು ಇಲ್ಲವೆಂದರೆ ಸುಳ್ಳಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಗೊತ್ತು ಶ್ರೀಕೃಷ್ಣ ಪಾರಿಜಾತ ವೃಕ್ಷದ ಬಗ್ಗೆ ಪಾರಿಜಾತ ವೃಕ್ಷ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಶ್ರೀಕೃಷ್ಣ ಹಾಗೂ ಸತ್ಯಭಾಮೆ. ಪಾರಿಜಾತ ವೃಕ್ಷವನ್ನು ಸ್ವರ್ಗದಿಂದ ಸತ್ಯಭಾಮೆಗಾಗಿ ಶ್ರೀಕೃಷ್ಣನು ತಂದಿದ್ದಾನೆ ಎನ್ನುವ ವೃತ್ತಾಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇನ್ನೂ ಹೀಗೆ ಬೋಕರಿಸಲ್ಪಟ್ಟ ಪಾರಿಜಾತ ವೃಕ್ಷ ಮತ್ತೆಲ್ಲೂ ಇಲ್ಲ. ಅದು ನಮ್ಮ ಭಾರತ ದೇಶದಲ್ಲಿಯೇ ಇದೆ.
ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ತನ್ನ ಪ್ರಿಯಸಖಿಯಾದ ಸತ್ಯಭಾಮೆಗೆ ಬೋಕರಿಸಬೇಕೆಂದ್ದಿದ ವೃಕ್ಷ. ಇದು ಕಿಟೂರು ಗ್ರಾಮದಲ್ಲಿ ಬಾರಮಕೀ ಜಿಲ್ಲೆಯ 30 ಕಿ.ಮೀ ದೂರದಲ್ಲಿದೆ. ಇನ್ನು ಪ್ರಪಂಚ ವ್ಯಾಪ್ತವಾಗಿ ಬಾಟನಿ ಶಾಸ್ತ್ರಜ್ಞರು ಅಂದರೆ ಸಸ್ಯಶಾಸ್ತ್ರಜ್ಞರು ಈ ವೃಕ್ಷದ ಬಗ್ಗೆ ಪರಿಶೋಧನೆ ನಡೆಸಿ ಇದೊಂದು ವಿಲಕ್ಷಣವಾದಂತಹ ವೃಕ್ಷ ಎಂದು ಗುರುತಿಸಿದ್ದಾರೆ. ಇನ್ನು ಈ ವೃಕ್ಷವಿರುವ ಗ್ರಾಮದಿಂದ 3 ಕಿ.ಮೀ.ದೂರದಲ್ಲಿ ಕುಂತಿ ಎಂಬ ಊರು ಇದೆ.ಕುಂತಿ ಎಂದ ತಕ್ಷಣ ನೆನಪಿಗೆ ಬರುವುದು ಮಹಾಭಾರತದಲ್ಲಿರುವ ಪಾಂಡವರ ತಾಯಿ ಕುಂತಿದೇವಿ.ಇಲ್ಲಿ ಕುಂತಿದೇವಿ ವಾಸವಾಗಿದ್ದಳು.
ಒಂದು ಶಿವಾಲಯವನ್ನು ಕೂಡ ನಿರ್ಮಿಸಿ ಅಲ್ಲಿ ಆ ಶಿವನಿಗೆ ಪಾರಿಜಾತ ವೃಕ್ಷದ ಹೂವುಗಳಿಂದ ಪೂಜಿಸುತ್ತಿದ್ದಳು ಎನ್ನುವ ಮತ್ತೊಂದು ಕಥೆಯನ್ನು ಕೇಳುತ್ತೇವೆ ಮತ್ತು ಕೆಲವರ ಪ್ರಕಾರ ಇಲ್ಲಿ ಅರ್ಜುನನು ಸ್ವರ್ಗದಿಂದ ಪಾರಿಜಾತ ವೃಕ್ಷವನ್ನು ತಂದನೆಂದು ಹೇಳಲಾಗುತ್ತದೆ. ಹೀಗೆ ಇಂದ್ರಲೋಕದಿಂದ ಶ್ರೀಕೃಷ್ಣ ಪರಮಾತ್ಮನು ಸತ್ಯಭಾಮೆಗಾಗಿ ಪಾರಿಜಾತ ವೃಕ್ಷವನ್ನು ತಂದು ಬಹುಕರಿಸಿದನೆಂದು ತದನಂತರ ಕಷ್ಟಗಳ ಪಾಲಾದಾನೆಂದು ಹೇಳುತ್ತಾರೆ. ಇನ್ನೂ ಅದರ ನಂತರ ಬರುವ ಶ್ರೀಕೃಷ್ಣ ಪಾರಿಜಾತಪಹರಣ ಪ್ರತಿಯೊಬ್ಬರಿಗೂ ಗೊತ್ತಿರುವುದೇ.
ಇನ್ನು ಈ ವೃಕ್ಷವು ಸರಿಸುಮಾರಾಗಿ ಐದು ಸಾವಿರ ವರ್ಷಗಳಷ್ಟು ಪುರಾತನವಾದುದು ಎಂದು ಹೇಳಲಾಗುತ್ತದೆ. ಇನ್ನು ವೃಕ್ಷದ ಪ್ರತ್ಯೇಕತೆಯನ್ನು ಏನು ಎಂದರೆ ಇದರ ಶಾಖೆಗಳ ಮೂಲಕ ಅಥವಾ ರೆಂಬೆಗಳ ಮೂಲಕ ಪುನರುತ್ಪತ್ತಿಯಾಗಲಿ, ಹಣ್ಣುಗಳಾಗಲಿ ಉತ್ಪತ್ತಿಯಾಗುವುದಿಲ್ಲ.ಇದು ಸದಾಕಾಲ ಹೂ ಬಿಡುವುದಿಲ್ಲ. ಕೇವಲ ಜೂನ್-ಜುಲೈ ತಿಂಗಳಲ್ಲಿ ಮಾತ್ರವೇ ಹೂ ಬಿಡುತ್ತದೆ. ಇನ್ನು ಇದರ ಹೂವಿನ ಸುಗಂಧ ದೂರದೂರದವರೆಗೂ ವ್ಯಾಪ್ತಿ ಹೊಂದಿದೆ. ಇನ್ನೂ ಈ ವೃಕ್ಷದ ಎತ್ತರ 45 ಅಡಿಗಳಿದ್ದು ಇದರ ಸುತ್ತಳತೆ 50 ಅಡಿಗಳು ಎಂದು ಹೇಳಲಾಗುತ್ತದೆ.
ಇನ್ನು ಇದರ ಶಾಖೆಗಳಲ್ಲಿರುವ ಎಲೆಗಳು ಒಣಗುವುದಿಲ್ಲ,ಬಾಡುವುದಿಲ್ಲ. ಕೇವಲ ಮುದುಡಿ ಹೋಗಿ ಖಾಂಡದಲ್ಲಿಯೇ ಒಂದಾಗಿ ಬಿಡುತ್ತದೆ.ಹೀಗೆ ಇದೊಂದು ಕಲಿಯುಗದ ಕೃಷ್ಣ ವೃಕ್ಷವೆಂದು ಇಂದಿಗೂ ನಮ್ಮ ಭಾರತದಲ್ಲಿ ಶ್ರೀಕೃಷ್ಣನ್ನು ದೇವಲೋಕದಿಂದ ತಂದಂತಹ ಪಾರಿಜಾತ ವೃಕ್ಷ ನಮ್ಮದೇಶದಲ್ಲಿ ನೆಲೆಸಿದೆ ಎಂದು ಅದೇ ಪಾರಿಜಾತ ವೃಕ್ಷ ಎಂದು ಹೇಳಲಾಗುತ್ತದೆ.