ಉಪಯುಕ್ತ ಮಾಹಿತಿ

ನಿಮ್ಮ ಪಾನ್‌ಕಾರ್ಡ್‌ ಆಧಾರ್‌ ಜೊತೆ ಲಿಂಕ್ ಆಗಿದೆಯೇ? ತಿಳಿಯೋದು ಹೇಗೆ? ಇಲ್ಲಿದೆ ವಿವರ

By KOLAR NEWS CHANDRU

February 22, 2023

ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ  (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ  1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ.

ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಈ ಕಾಯ್ದೆಯ ಪ್ರಕಾರ ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್‌ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. ಹೀಗಾಗಿ ಮಾರ್ಚ್‌ 31, 2023ರ ಒಳಗೆ ನಿಮ್ಮ ಪಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡದಿದ್ದರೆ ಅದು ಅಮಾನ್ಯವಾಗಲಿದೆ.

ಹೀಗಾಗಿ ನೀವು ಈಗಾಗಲೇ ಪಾನ್‌ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ.

ನಿಮ್ಮ ಪಾನ್‌ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್‌ ಆಗಿದೆಯೇ ಅನ್ನೋದನ್ನು ತಿಳಿಯಲು ಈ ಕೆಳಗಿನಂತೆ ಫಾಲೋ ಮಾಡಿ

https://eportal.incometax.gov.in/iec/foservices/#/pre-login/link-aadhaar-status

ಗೂಗಲ್‌ನಲ್ಲಿ www.incometax.gov.in ವೆಬ್‌ಸೈಟ್ ಓಪನ್ ಮಾಡಿ ಈಗ ‘ಕ್ವಿಕ್‌ ಲಿಂಕ್ಸ್‌’ನ ಅಡಿಯಲ್ಲಿ ಕಾಣುವ ‘ಲಿಂಕ್ ಆಧಾರ್ ಸ್ಟೇಟಸ್‌’ ಆಯ್ಕೆಯನ್ನು ಒತ್ತಿರಿ. ಈಗ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಹೊಸ ಪುಟ ತೆರೆಯುತ್ತದೆ. ಈಗ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ವಿವರಗಳನ್ನು ಹಾಕಿದ ನಂತರ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸುವ ಪುಟ ಕಾಣಿಸಿಕೊಳ್ಳುತ್ತದೆ.

ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡೋದು ಯಾಕೆ ಕಡ್ಡಾಯ? 2017ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯಲ್ಲಿ 139AA ಎಂಬ ಹೊಸ ಸೆಕ್ಷನ್‌ ತಂದಿದೆ. ಆ ಪ್ರಕಾರ ಹೊಸ ಪಾನ್‌ಗೆ ಅರ್ಜಿ ಸಲ್ಲಿಸುವಾಗ ಮತ್ತು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಹೀಗಾಗಿ ಇದಕ್ಕೂ ಮೊದಲೇ ಪಾನ್ ಕಾರ್ಡ್‌ ಹೊಂದಿದ್ದವರು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೂ ಮೊದಲೇ ಆಧಾರ್ ಜೊತೆ ಲಿಂಕ್ ಮಾಡೋದು ಕಡ್ಡಾಯ. ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ಪಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.

ನಿಮ್ಮ ಪಾನ್‌ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್‌ ಆಗಿದೆಯೇ ಅನ್ನೋದನ್ನು ತಿಳಿಯಲು  ವೆಬ್‌ಸೈಟ್ ಓಪನ್ ಮಾಡಿ