ಬಿಜೆಪಿ ಸಂಸದರೊಬ್ಬರು ಆನ್ಲೈನ್ ದೋಖಾಕ್ಕೆ ಒಳಗಾದವರ ಪಟ್ಟಿಗೆ ಸೇರಿದ್ದಾರೆ. ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಬೇಕು ಎಂಬ ಆಸೆಯಿಂದ ಇದೇ ಮೊದಲ ಬಾರಿಗೆ ಅವರು ಆನ್ಲೈನ್ ಮೂಲಕ ಅದನ್ನುಖರೀದಿಸಿದ್ದರು. ಡೆಲಿವರಿ ಬಾಯ್ ಬಂದು ಆ ಪಾರ್ಸೆಲನ್ನು ತಂದುಕೈಗಿಟ್ಟು ಹೋದರು.
ಹೊಸ ಸ್ಮಾರ್ಟ್ಫೋನ್ ಕೈ ಸೇರಿದ ಖುಷಿಯಲ್ಲಿದ್ದರು ಸಂಸದರು. ಹಾಗಾಗಿ ಡೆಲಿವರಿ ಬಾಯ್ ಎದುರೇ ಆ ಪಾರ್ಸೆಲ್ಬಿಚ್ಚಿ ನೋಡುವ ಗೋಚಿಗೆ ಹೋಗಿರಲಿಲ್ಲ.ಸೋಮವಾರ ಬೆಳಗ್ಗೆ ಎಂದಿನಂತೆ ದಿನಚರಿಆರಂಭಿಸಿದ ಸಂಸದರು, ಆ ಪಾರ್ಸೆಲ್ಬಿಚ್ಚಿ ನೋಡಿದರು. ಸ್ಯಾಮ್ಸಂಗ್ ಫೋನ್ಬಾಕ್ಸ್ ಇರಬೇಕಾದಲ್ಲಿ, ರೆಡ್ಮಿ 5ಎಫೋನಿನ ಬಾಕ್ಸ್ ಇತ್ತು! ಇದೇಕೇಹೀಗಾಯಿತು, ಬುಕ್ ಮಾಡಿದ್ದೇ ಒಂದುಬಂದಿರುವುದೇ ಇನ್ನೊಂದು ಎಂದು ಅಚ್ಚರಿಯಿಂದ ಸಂಸದರುನಿಧಾನವಾಗಿ ಆ ಬಾಕ್ಸ್ ಓಪನ್ಮಾಡಿದರು!ಅವರಿಗೆಆಘಾತ ಕಾದಿತ್ತು. ಸ್ಯಾಮ್ಸಂಗ್ ಫೋನ್ಬಿಡಿ, ರೆಡ್ ಮಿ5ಎಫೋನ್ ಕೂಡ ಇರಲಿಲ್ಲ… ಸ್ಮಾರ್ಟ್ಫೋನ್ ಬದಲು ಎರಡುನುಣುಪಾದ ಮಾರ್ಬಲ್ ತುಂಡುಗಳು ಅವರನ್ನುಅಣಕಿಸುತ್ತಿತ್ತು!
ಈ ರೀತಿ ವಂಚನೆಗೆ ಒಳಗಾದವರು ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಸಂಸದ ಖಗೇನ್ ಮುರ್ಮು.ಅವರಿಗೆ ಆನ್ಲೈನ್ ಶಾಪಿಂಗ್ಐಡಿಯಾ ಇಲ್ಲದ ಕಾರಣ, ಅವರಪುತ್ರನೇ ಸ್ಯಾಮ್ಸಂಗ್ ಫೋನ್ಖರೀದಿಗೆ ಆರ್ಡರ್ ಮಾಡಿದ್ದರು. ಹಣಪಾವತಿಯ ಆಯ್ಕೆಯನ್ನು ಕ್ಯಾಷ್ ಆನ್ ಡೆಲಿವರಿನೀಡಿದ್ದರು.
ಡೆಲಿವರಿ ಬಾಯ್ ಪಾರ್ಸೆಲ್ ತಂದು ಸಂಸದರ ಪತ್ನಿಯ ಕೈಗೆ ಕೊಟ್ಟಿದ್ದಾನೆ. ಅವರಿಂದ ಫೋನಿನ ಬೆಲೆಯಾದ 11,999 ರೂಪಾಯಿಯನ್ನು ನಗದಾಗಿ ಪಡೆದುಕೊಂಡು ವಾಪಸಾಗಿದ್ದಾನೆ. ಸೋಮವಾರ ಮನೆ ತಲುಪಿದ ಸಂಸದ ಮುರ್ಮು ಫೋನ್ ಬಾಕ್ಸ್ ಕೈಗೆತ್ತಿಕೊಂಡು ತೆರೆದು ನೋಡಿದಾಗ ಅವರಿಗೆ ಈ ಶಾಕ್ ಕಾದಿತ್ತು.
ಮಾಲ್ಡಾದ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ದೂರುದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೇವೇಳೆ, ಈ ಅಂತರ್ಜಾಲ ತಾಣದವಂಚನೆ ವಿಚಾರವನ್ನು ಗ್ರಾಹಕ ವ್ಯವಹಾರಗಳ ಸಚಿವರಗಮನಕ್ಕೆ ತರುವುದಾಗಿ ಸಂಸದ ಮುರ್ಮು ತಿಳಿಸಿದ್ದಾರೆ.