ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ…
ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ
ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ನಂತರ ದೋಸೆ ಹೆಂಚು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹೆಂಚು ಕಾದ ಮೇಲೆ ದಪ್ಪವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ನೀವು ಬಯಸುವ ರುಚಿಕರವಾದ ಈರುಳ್ಳಿ ದೋಸೆ ಸಿದ್ಧವಿರುತ್ತದೆ.