ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್ ಬಾಸ್ ಮನೆಯ ಬೇಬಿ ಡಾಲ್ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ‍್ಯಾಪ್ ಸ್ಟಾರ್ ಚಂದನ್ ಶೆಟ್ಟಿಯವರ ಮನಸ್ಸನ್ನು ಗೆದ್ದು ಬಿಗ್ಬಾಸ್ ಬೊಂಬೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ನಮಗೆ ಗೊತ್ತಿದೆ. ಈ ಸಾಲಿಗೆ ಮತ್ತೊಂದು ವಿಷಯವೆಂದೆ ಈಗ ನಿವ್ವಿ ಕೆಲಸಕ್ಕೆ ಹೊರಟ್ಟಿದ್ದಾರೆ.
ಇದೇ ವರ್ಷ ಮೈಸೂರಿನ ಯುವ ದಸರಾದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಓಪನ್ ಆಗಿ ಪ್ರಪೋಸ್ ಮಾಡಿದ್ದು ಯಾರು ಮರೆಯಲು ಸಾಧ್ಯವಿಲ್ಲ. ಅಂದಿನಿಂದ ಇಂದಿನ ತನಕ ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿಯ ಮೇಲೆ ಎಲ್ಲರೂ ಒಂದು ಕಣ್ಣಿಟ್ಟಿದ್ದಾರೆ. . ಈಗ ಇದೇ ಬೇಬಿ ಡಾಲ್ ನಿವೇದಿತಾ ಗೌಡರ ಮನೆಯಿಂದ ಹೊಸದೊಂದು ಸ್ಪೆಷಲ್ ಸಮಾಚಾರ ಹೊರಬಂದಿದೆ. ನಿವೇದಿತಾ ಗೌಡ ಕೆಲಸಕ್ಕೆ ಹೊಗುತ್ತಿದ್ದಾರೆ. ಅದು ಏರ್ ಪೋರ್ಟ್ ನಲ್ಲಿ ಎಂಬುದನ್ನು ಖುದ್ದು ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಡಾಲ್ ಪೋಸ್ಟ್ ಮಾಡಿದ್ದಾರೆ.
ಬಾರ್ಬಿ ಡಾಲ್ ನಿವೇದಿತಾ ಗೌಡ ಏರ್ಪೋರ್ಟ್ ಕೆಲಸ ಮಾಡುವ ಗುರಿಯಿಟ್ಟುಕೊಂಡಿದ್ದರು. ಅದರಂತೆ ಅವರಿಗೆ ಇದೀಗ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ದಲ್ಲಿ ಆಪರೇಟರ್ ಅಸಿಸ್ಟೆಂಟ್ ಕೆಲಸ ಸಿಕ್ಕಿದೆ. ಈ ವಿಚಾರವನ್ನು ನಿವೇದಿತಾ ಗೌಡ ತಮ್ಮ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ಕೊನೆಗೂ ಎಂದು ಬರೆದು ವಿಮಾನ ಹಾಗೂ ಹಾರ್ಟ್ ಎಮೋಜಿ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ 79 ಸಾವಿರಕ್ಕೂ ಅಧಿಕ ನೆಟ್ಟಿಗರು ಅಭಿನಂದನೆ ತಿಳಿಸಿದ್ದಾರೆ.
ಮದುವೆ ತಯಾರಿ ನಡುವೆಯೂ ನಿವೇದಿತಾ ಗೌಡ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ನನಗೆ ಏರ್ಪೋರ್ಟ್ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಈಗ ನಾನು ಇಷ್ಟಪಟ್ಟ ಕೆಲಸವೇ ಸಿಕ್ಕಿದೆ. ಏರ್ಪೋರ್ಟ್ ನಲ್ಲಿ ಕೆಲಸ ಮಾಡಲು ತುಂಬಾ ತಾಳ್ಮೆ, ಫ್ಯಾಶನ್ ಮತ್ತು ಆಸಕ್ತಿ ಇರಬೇಕು. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದು, ಆಪರೇಶನ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.