ಮನೆ ಖರೀದಿದಾರರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೊಸ ಶುಭ ಸಮಾಚಾರವೊಂದನ್ನು ನೀಡಿದ್ದಾರೆ. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ನಿರ್ಧಾರಗಳ ಬಗ್ಗೆ ಮಾದ್ಯಮಗಳಿಗೆ ವಿವರಿಸಿದ ಸೀತಾರಾಮನ್ “ಪ್ರಸ್ತುತ 1600 ಕ್ಕೂ ಹೆಚ್ಚು ವಸತಿಯೋಜನೆಗಳು ಸ್ಥಗಿತಗೊಂಡಿವೆ. ಹಾಗಾಗಿ ಸರ್ಕಾರ , ಕೈಗೆಟುಕುವ ಮತ್ತು ಮಧ್ಯಮ ಪ್ರಮಾಣದ ಪ್ರಸ್ತುತ ಸ್ಥಗಿತಗೊಂಡ ವಸತಿಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆಯ ಸಾಲ, ಹಣಕಾಸು ನೆರವು ನೀಡಲು ‘ವಿಶೇಷ ವಿಭಾಗ’ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.
ದೇಶದಲ್ಲಿಸ್ಥ ಗಿತವಾಗಿರುವ ವಸತಿ ಯೋಜನೆಗಳನ್ನು ಪುನಾರಂಭಿಸಿ ಪೂರ್ಣಗೊಳಿಸಲು 25 ಸಾವಿರಕೋಟಿ ರೂ.ಗಳ ನಿಧಿಯನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿತು. ಈ ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್) ಸರ್ಕಾರ 10,000 ಕೋಟಿ ರೂ., ಎಸ್‌ಬಿಐ ಮತ್ತು ಎಲ್‌ಐಸಿ 15,000 ಕೋಟಿ ರೂ. ನೀಡಲಿದೆ.ಇದು ದೇಶಾದ್ಯಂತ 4.58 ಲಕ್ಷ ವಸತಿ ಘಟಕಗಳನ್ನು ಒಳಗೊಂಡ 1,600 ಸ್ಥಗಿತಗೊಂಡ ವಸತಿ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ
ಈ ಉಪಕ್ರಮದಿಂದ ಉದ್ಯೋಗ ಸೃಷ್ಟಿಯಾಗುವುದು. ಜೊತೆಗೆ ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳ ಬೇಡಿಕೆಯನ್ನು ಪುನರುಜ್ಜೀವನ ಆಗಲಿದೆ.ಇದು ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿನ ಒತ್ತಡವನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಯೋಜನೆಯು ಸಾರ್ವಭೌಮ ಮತ್ತು ಪಿಂಚಣಿ ನಿಧಿ ಭಾಗವಹಿಸುವ ನಿರೀಕ್ಷೆಯಿರುವುದರಿಂದ ನಿಧಿಯ ಗಾತ್ರ ಹೆಚ್ಚಾಗುತ್ತದೆ. ಸರ್ಕಾರ ಪ್ರಾಯೋಜಕರಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 10,000 ಕೋಟಿ ರೂ.ನಿಧಿಯನ್ನು ಪರಿಹಾರವಾಗಿ ನೀಡುತ್ತದೆ.
ಇದು ವಸತಿ ಕಟ್ಟಡ ಅಭಿವೃದ್ಧಿದಾರರಿಗೆ(ಡೆವಲಪರ್‌ಗಳಿಗೆ ) ಅನುಕೂಲ ಕಲ್ಪಿಸಲಿದ್ದು ಮನೆ ಖರೀದಿದಾರರಿಗೆ ಮನೆಗಳ ವಿತರಣೆಯನ್ನು ಖಚಿತ ಪಡಿಸುತ್ತದೆ. “ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿದಹೆಚ್ಚಿನ ಸಂಖ್ಯೆಯ ಮಧ್ಯಮ ವರ್ಗದ ಗೃಹ ಬಳಕೆದಾರರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ಇದರಿಂದ ಸಹಾಯವಾಗಲಿದೆ. ಜತೆಗೆ ಆರ್ಥಿಕತೆಯಲ್ಲಿ ಉತ್ಪಾದಕ ಬಳಕೆಗಾಗಿವ ದೊಡ್ಡ ಪ್ರಮಾಣದ ಹಣವನ್ನು ಸಹ ಬಿಡುಗಡೆಯಾಗಲಿದೆ” ಸಚಿವರು ಮಾಹಿತಿ ನೀಡಿದ್ದಾರೆ.