ಸುದ್ದಿ

ಶುರುವಾಗಿದೆ ನಿಖಿಲ್ ಕುಮಾರ್‌ಸ್ವಾಮಿಗಾಗಿ ಹುಡುಗಿಯ ಹುಡುಕಾಟ,ಹೇಗಿರಬೇಕಂತೆ ಗೊತ್ತಾ,.?

By admin

November 26, 2019

ನಿಖಿಲ್ ಕುಮಾರ ಸ್ವಾಮಿ  ಮತ್ತು ಕೃಷ್ಣ ನಿರ್ದೇಶನದ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ.ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ ಇನ್ನು ಒಂದು ವಾರದೊಳಗೆ ಸ್ಕ್ರಿಫ್ಟ್ ಕೆಲಸ ಮುಗಿಯುತ್ತದೆ, ಆಮೇಲೆ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇವೆ”ಎಂದು ಮಾಹಿತಿ ನೀಡಿದ ನಿರ್ದೇಶಕ ಕೃಷ್ಣ. “ಇದೊಂದು ನೈಜಕಥೆ ಆಧಾರಿತ ಸಿನಿಮಾ. ಈಗ ಚಿತ್ರಕಥೆ ಕೆಲಸದಲ್ಲಿ ನಿರತನಾಗಿದ್ದೇನೆ, ಹೀರೋಯಿನ್ ಹುಡುಕಾಟ ಶುರುವಾಗಿದೆ. ಸಾಂಪ್ರದಾಯಿಕ ಲುಕ್‌ ಹೊಂದಿರುವ ಅದ್ಭುತ ನಟಿಗಾಗಿ ಶೋಧ ಮಾಡುತ್ತಿದ್ದೇವೆ, 

ನಿರ್ದೇಶಕ ಕೃಷ್ಣ ಇದೂವರೆಗೂ ಮಾಡಿರದ ಸಿನಿಮಾ ಇದು. ನಿಖಿಲ್ ಗೆಟಪ್ ಕೂಡ ತುಂಬ ಬದಲಾಗಿರಲಿದೆಯಂತೆ. ನಿಖಿಲ್ ಕೂಡ ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿರ್ದೇಶಕ ಮತ್ತು ನಿಖಿಲ್ ಬಿಟ್ಟರೆ ಈ ಸಿನಿಮಾದ ತಾಂತ್ರಿಕ ವರ್ಗ, ಕಲಾವಿದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹಣ ಹೂಡುತ್ತಿದೆ.

“ಜನರು ಬುದ್ಧಿವಂತರಿದ್ದಾರೆ, ತುಂಬ ಪ್ರಬುದ್ಧರಾಗಿದ್ದಾರೆ. ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ನನ್ನ ಕಳೆದೆರಡು ಚಿತ್ರಗಳಿಗಿಂತ ಈ ಬಾರಿ ಕೊಂಚ ವಿಭಿನ್ನವಾದ ಕಾನ್ಸೆಪ್ಟ್‌ ಮೇಲೆ ಸಿನಿಮಾ ಮಾಡುತ್ತಿದ್ದೇವೆ. ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನ್‌ಪ್ಲೇ ಬರೆಯಲಾಗಿದೆ. ಈ ಹಿಂದೆ ನನ್ನ ಎರಡು ಸಿನಿಮಾಗಳು ಸಹ ಬೇರೆ ಬೇರೆ ರೀತಿಯಲ್ಲೇ ಇದ್ದವು. ಹೀಗಾಗಿ ನಾವಿಬ್ಬರೂ ಹೊಸ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿ ಅದೇ ತಯಾರಿಯಲ್ಲಿದ್ದೇವೆ.

ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ, ನನ್ನ ಎರಡನೇ ಸಿನಿಮಾ ಕೃಷ್ಣ ಜೊತೆ ಮಾಡಬೇಕಿತ್ತು. ಆದರೆ ಅವರು ‘ಹೆಬ್ಬುಲಿ’ಯಲ್ಲಿ ಬಿಜಿಯಿದ್ದರು. ಆಗ ನಿರ್ದೇಶಕ ಜೊತೆ ಹರ್ಷ ಸಿನಿಮಾ ಮಾಡಿದೆ. ಕಮರ್ಷಿಯಲ್ ಅಂಶ ಇಟ್ಟುಕೊಂಡು ವಿಭಿನ್ನವಾಗಿ ಸಿನಿಮಾ ಮಾಡುತ್ತೇವೆ, ಈಗಾಗಲೇ ಸಣ್ಣ ಆಗಿದ್ದೇನೆ, ಸಿನಿಮಾಕ್ಕಾಗೋಸ್ಕರ ಇನ್ನೂ ಸಣ್ಣ ಆಗಬೇಕಿದೆ” ಎಂದಿದ್ದಾರೆ ನಿಖಿಲ್