2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ.
ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ ಮಾಘ ಪೂರ್ಣಿಮ ಮತ್ತು ಮಾರ್ಚ್ ನಲ್ಲಿ ಮಹಾಶಿವರಾತ್ರಿಯಂದು ಪುಣ್ಯ ಸ್ನಾನ ಮಾಡಲು ಈ ಸ್ಥಳಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಜನವರಿಯಿಂದ ಮಾರ್ಚ್ ವರೆಗೆ ವಿವಾಹ ನಡೆಸದಿರಲು ಸೂಚಿಸಲಾಗಿದ್ದು, ಇದರಿಂದಾಗಿ ಈಗಾಗಲೇ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಕೆಲವರು ಅದನ್ನು ಮುಂದೂಡುತ್ತಿದ್ದರೆ ಮತ್ತೆ ಹಲವರು ಸ್ಥಳವನ್ನೇ ಬದಲಾಯಿಸಿದ್ದಾರೆ. ಸರ್ಕಾರದ ಈ ತೀರ್ಮಾನದಿಂದಾಗಿ ಪ್ರಯಾಗ್ ರಾಜ್ ನ ವ್ಯಾಪಾರ ವಹಿವಾಟುಗಳ ಮೇಲೂ ತೀವ್ರ ಪರಿಣಾಮ ಬೀರಿದೆ.