ಸುದ್ದಿ

ಬಡ ರೈತನ ಮಗಳ ಚಿಕಿತ್ಸೆಗಾಗಿ ಸ್ಪಂದಿಸಿ 30 ಲಕ್ಷ ರೂ, ಸಹಾಯ ಮಾಡಿದ ನರೇಂದ್ರಮೋದಿ…!

By admin

June 24, 2019

ಅನಾರೋಗ್ಯದಿಂದ ಬಳಲುತ್ತಿದ್ದ ಬಡ ರೈತನ ಮನವಿಗೆ ಸ್ಪಂದಿಸಿದ ಮೋದಿ 30 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಿದ್ದಾರೆ.

ಜೈಪುರದ ಸುಮೇರ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತನ್ನ ಕಷ್ಟದ ಕಥೆಯನ್ನು ತಿಳಿಸಿದ್ದರು. ತನ್ನ ಮಗಳು ಅನಾರೋಗ್ಯದ ಸಮಸ್ಯೆಯಿಂದ ಬಳುತ್ತಿದ್ದು, ಈಗಾಗಲೇ ತನ್ನ ಮನೆ, ಜಮೀನು ಮಾರಾಟ ಮಾಡಿ 7 ಲಕ್ಷ ರೂ. ಖರ್ಚು ಮಾಡಿದ್ದೇನೆ. ಇನ್ನು ನನ್ನ ಮಗಳ ಚಿಕಿತ್ಸೆ ಹಣದ ಅಗತ್ಯವಿದ್ದು, ಸರ್ಕಾರ ತಮ್ಮ ನೆರವಿಗೆ ಬರುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ರೈತ ಸುಮೇರ್ ಸಿಂಗ್ ಪತ್ರಕ್ಕೆ ಪ್ರಧಾನಿಗಳ ಕಾರ್ಯಾಲಯ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಗಳ ರಾಷ್ಟ್ರಿಯ ಪರಿಹಾರ ನಿಧಿಯಿಂದ 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.

ಚಿಕಿತ್ಸೆಗೆ ಅಪರೇಷನ್ ಅಗತ್ಯವಿದ್ದು, ಜೈಪುರ ಆಸ್ಪತ್ರೆ ಸುಮಾರು 10 ಲಕ್ಷ ರೂ.ಗಳನ್ನು ಆಗುತ್ತದೆ ಎಂದು ತಿಳಿಸಿದೆ. ರೈತನ ಮಗಳು ಅಪ್ಲ್ಯಾಸ್ಟಿಕ್ ಅನಿಮಿಯಾ (ರಕ್ತಹೀನತೆ) ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ದೇಹದಲ್ಲಿ ಹೊಸ ರಕ್ತಗಳ ಉತ್ಪಾದನೆ ಆಗದಿರುವುದರಿಂದ ಆಕೆಗೆ ಮೂಳೆ ಮಜ್ಜೆಯ ಕಸಿ ಅಗತ್ಯವಿದೆ. ಈ ಆಪರೇಷನ್‍ಗಾಗಿಯೇ 10 ಲಕ್ಷ ರೂ. ಗಳನ್ನು ರೈತ ಪಾವತಿ ಮಾಡಬೇಕಿತ್ತು.

ಅಪ್ಲ್ಯಾಸ್ಟಿಕ್ ಅನಿಮಿಯಾ ಎಂಬುವುದು ದೇಹ ಹೊಸ ರಕ್ತಕಣಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಉಂಟಾಗುವ ಸ್ಥಿತಿಯಾಗಿದೆ. ಈ ವೇಳೆ ಹೆಚ್ಚಿನ ರಕ್ತಸ್ರಾವ, ಸೋಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಬಹುಬೇಗ ಚಿಕಿತ್ಸೆ ಲಭ್ಯವಾಗದಿದ್ದರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.