The Prime Minister, Shri Narendra Modi during his visit to the Kedarnath Temple, in Uttarakhand on May 03, 2017. The Governor of Uttarakhand, Dr. Krishan Kant Paul is also seen.

ಸುದ್ದಿ

2 ದಿನಗಳ ಭೇಟಿಗಾಗಿ ಕೇದಾರನಾಥಕ್ಕೆ ಬಂದಿಳಿದ ಪ್ರಧಾನಿ ಮೋದಿ, ಪುನರ್ನಿರ್ಮಾಣ….

By admin

May 18, 2019

ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡದ ಕೇದಾರನಾಥಕ್ಕೆ ಶನಿವಾರ ಆಗಮಿಸಿದರು. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ ಮರುದಿನವೇ ಪ್ರಧಾನಿ ಕೇದಾರನಾಥಕ್ಕೆ ಭೇಟಿ ನೀಡಿದರು. ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು.

ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ಕಣಿವೆಯ ಸುತ್ತಲಿನ ಎಲ್ಲ ಅಧಿಕಾರಿಗಳೂ ಕಟ್ಟೆಚ್ಚರದಿಂದ ಇರುವಂತೆ ರಾಜ್ಯ ವಿಕೋಪ ಪರಿಹಾರ ಪಡೆಯ (ಎಸ್‌ಡಿಆರ್‌ಎಫ್‌) ಕಮಾಂಡೆಂಟ್ ತೃಪ್ತಿ ಭಟ್‌ ನಿರ್ದೇಶನ ನೀಡಿದ್ದಾರೆ.

ಕೇದಾರನಾಥದ ಭಗವಾನ್ ಶಿವನ ಮಂದಿರಕ್ಕೆ ಪ್ರಧಾನಿ ಮೋದಿ ಹಿಂದೆಯೂ ಹಲವು ಬಾರಿ ಭೇಟಿ ನೀಡಿದ್ದರು. ಆರು ತಿಂಗಳ ಚಳಿಗಾಲದ ರಜೆಯ ಬಳಿಕ ಕೇದಾರನಾಥ ಮಂದಿರದ ವೆಬ್‌ಸೈಟ್‌ ಅನ್ನು ಪ್ರವಾಸಿಗರ ಬುಕಿಂಗ್‌ಗಾಗಿ ಮತ್ತೆ ಮೇ 9ರಂದು ತೆರೆಯಲಾಗಿದೆ..