ಸುದ್ದಿ

ಹೆತ್ತ ತಾಯಿಗೆ ಈ ಮಗ ಮಾಡಿರುವ ಕೆಲಸ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ..

By admin

February 08, 2019

ಹೆತ್ತು ಹೊತ್ತು ಸಾಕಿ.. ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾರೆ.. ಮಕ್ಕಳು ದೊಡ್ಡ ದೊಡ್ಡ ಮನೆಯಲ್ಲಿ ಇರಬೇಕು.. ದೊಡ್ಡ ಮನುಷ್ಯರಾಗಿ ಬದುಕಬೇಕು ಎಂದೆಲ್ಲಾ ಆಸೆ ಪಡುತ್ತಾರೆ.. ಆದರೆ ಅದ್ಯಾಕೊ ಕೆಲವು ಪಾಪಿ ಹೃದಯಗಳು ಅಷ್ಟೆಲ್ಲಾ ಆಸೆ ಪಟ್ಟ ಹೆತ್ತವರನ್ನು ಅಯ್ಯೋ ಎನಿಸಿ ನರಕದ ದಾರಿಯನ್ನು ಸುಗಮ ಮಾಡಿಕೊಳ್ಳುತ್ತಾರೆ..

ಇಂತಹ ಮನಕಲುಕುವ ಘಟನೆ ನಡೆದಿದ್ದು ಮಗ ತನ್ನ ಪತ್ನಿಯ ಜತೆಗೂಡಿ ಹೆತ್ತತಾಯಿಯನ್ನೇ 3 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ಘಟನೆ, ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಬಿಸನಹಳ್ಳಿಯಲ್ಲಿ ನಡೆದಿದ್ದು, ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ತಾಯಿಯನ್ನು ರಕ್ಷಿಸಿದ್ದಾರೆ. 

ಕಾಡಬಿಸನಹಳ್ಳಿಯ ಮುನಿಯಮ್ಮ ನರಕಯಾತನೆಯಿಂದ ಮುಕ್ತಿಗೊಂಡ ತಾಯಿ. ವೆಂಕಟಸ್ವಾಮಿ ಹಾಗೂ ಆಕೆಯ ಪತ್ನಿ ಸುಜಾತ, ಮುನಿಯಮ್ಮರನ್ನು ಕೂಡಿಹಾಕಿದ ಆರೋಪಕ್ಕೆ ಗುರಿಯಾಗಿರುವವರು. ಹೀಗೆ ಮಹಿಳೆಯೊಬ್ಬರನ್ನು ಗೃಹಬಂಧನದಲ್ಲಿರಿಸಿ ಆಕೆಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳೀಯ ಯುವತಿಯೊಬ್ಬಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಳು. 

ಈ ಕುರಿತು ಟಿವಿ ಮಾಧ್ಯಮವೊಂದು ವರದಿ ಪ್ರಸಾರ ಮಾಡಲಾಗಿ ಮಾರತಹಳ್ಳಿ ಪೋಲೀಸರು ಎಚ್ಚೆತ್ತುಕೊಂಡು ಮುನಿಯಮ್ಮನನ್ನು ಬಂಧನ ಮುಕ್ತಗೊಳಿಸಿದ್ದಾರೆ.. ಮಗನಿಗೂ ಎಚ್ಚರಿಕೆ ನೀಡಿದ್ದಾರೆ‌..