ಪ್ರೇಮ

ತನ್ನ ಮರಿಗಾಗಿ ಈ ಕೋತಿ ಆಸ್ಪತ್ರೆಯ ಬಳಿ ಮಾಡಿದ ಕೆಲಸವನ್ನ ನೋಡಿದರೆ ಕಣ್ಣೀರು ಬರುತ್ತದೆ.

By admin

January 24, 2020

ಸ್ನೇಹಿತರೆ ನಾವು ಮನುಷ್ಯತ್ವದ ಬಗ್ಗೆ ಮತ್ತು ಮನುಷ್ಯರು ಮಾಡುವ ಸಹಾಯದ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ, ಆದರೆ ಪ್ರಾಣಿಗಳು ತೋರುವ ಪ್ರೀತಿಯ ಬಗ್ಗೆ ನಾವು ನೋಡಿರುವುದು ಮತ್ತು ಕೇಳಿರುವುದು ತುಂಬಾ ಕಡಿಮೆ. ಸ್ನೇಹಿತರೆ ನಿಮ್ಮ ಹೃದಯಕ್ಕೆ ಹತ್ತಿರವಾಗುವ ಘಟನೆಯೊಂದು ನಮ್ಮ ದೇಶದಲ್ಲಿ ನಡೆದಿದ್ದು ಅದನ್ನ ಕೇಳಿದ ಜನರ ಕಣ್ಣಲ್ಲಿ ಕೂಡ ನೀರು ಬಂದಿದೆ. ತುಂಬಾ ಜನರು ಅವರ ಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳುವುದರಲ್ಲಿಯೇ ದಿನವನ್ನ ಕಳೆಯುತ್ತಾರೆ, ತಮ್ಮ ಕಷ್ಟಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಅವರಿಗೆ ಸಮಯ ಇರುವುದಿಲ್ಲ ಇಂತಹ ಸಮಯದಲ್ಲಿ ಬೇರೆಯವರ ಕಷ್ಟದ ಬಗ್ಗೆ ಹೇಗೆ ತಾನೇ ಯೋಚನೆ ಮಾಡಲು ಹೇಗೆ ಸಾಧ್ಯ ನೀವೇ ಹೇಳಿ. ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವ ಪ್ರಾಣಿಗಳಲ್ಲಿ ಇನ್ನು ಜೀವಂತ ಆಗಿದೆ ಅನ್ನುವುದನ್ನ ಈ ಘಟನೆ ನಿರೂಪಿಸಿದೆ.

ಹಾಗಾದರೆ ಅಲ್ಲಿ ನಡೆದಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಕೋತಿಗಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ, ಆದರೆ ನಾವು ಹೇಳುವ ಈ ಕೋತಿ ಪ್ರಾಣವನ್ನ ಕಳೆದುಕೊಂಡ ತನ್ನ ಮಗುವನ್ನ ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಹೋಗಿದೆ ಮತ್ತು ಇದನ್ನ ನೋಡಿದ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಕೋತಿ ಆಸ್ಪತ್ರೆಗೆ ಬಂದಿರುವುದನ್ನ ಕಂಡು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ, ಇನ್ನು ಕೋತಿ ಗಾಯಗೊಂಡ ತನ್ನ ಮರಿಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅದನ್ನ ಪರಿಶೀಲನೆ ಮಾಡಿದ ವೈದ್ಯರು ಅದೂ ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ. ತನ್ನ ಮಗು ಸತ್ತು ಹೋಗಿದೆ ಅಂದರೆ ಅದನ್ನ ಹೆತ್ತ ತಾಯಿ ಜೀವನ ಹೇಗೆ ಒಪ್ಪಿಕೊಳ್ಳುತ್ತದೆ ನೀವೇ ಹೇಳಿ, ತನ್ನ ಮರಿ ಎದ್ದೆಳುತ್ತದೆ ಎಂದು ಎದುರು ನೋಡುತ್ತಿತ್ತು ಆ ತಾಯಿ ಕೋತಿ.

ಒಂದು ಊರಿನಲ್ಲಿ ಒಂದು ಹಳೆಯದಾದ ಮನೆ ಇದ್ದು ಆ ಮನೆಯ ಗೋಡೆಯ ಮೇಲೆ ಕರೆಂಟ್ ವೈಯರ್ ಒಂದು ತೂಗಾಡುತ್ತಿತ್ತು ಮತ್ತು ಅದೂ ಹೆಚ್ಚಿನ ಕರೆಂಟ್ ಸಪ್ಲೈ ಮಾಡುವ ಪವರ್ ಫುಲ್ ಕರೆಂಟ್ ತಂತಿ ಆಗಿತ್ತು ಹಾಗೆ ಆ ಕರೆಂಟ್ ತಂತಿ ಗಿಡಗಳ ಮದ್ಯೆ ಇದ್ದಿತ್ತು. ಇನ್ನು ದಾರಿಯಲ್ಲಿ ಕೋತಿ ಮರಿ ನಡೆದುಕೊಂಡು ಬರುತ್ತಿದ್ದಾಗ ಭೂಮಿಗೆ ಮೇಲೆ ಬಿಸಿಲಿನ ತಾಪ ಜಾಸ್ತಿ ಆದಕಾರಣ ಆ ಕೋತಿ ಮರಿ ಮರದ ಮೇಲೆ ಏರಿ ಕುಳಿತಿದೆ, ಈ ಸಮಯದಲ್ಲಿ ಆ ಮರಿ ಕೋತಿಗೆ ಆ ತಂತಿ ತಾಗಿದ ಕಾರಣ ಆ ಕೋತಿ ಮರಿಗೆ ಶಾಕ್ ಹೊಡೆದು ಸ್ಥಳದಲ್ಲೇ ಸತ್ತು ಹೋಯಿತು. ಇನ್ನು ಈ ಘಟನೆ ನಡೆದ ಸ್ವಲ್ಪ ದೂರದಲ್ಲಿ ಒಂದು ಜಿಲ್ಲಾ ಪಶು ಆಸ್ಪತ್ರೆ ಇತ್ತು ಮತ್ತು ತಕ್ಷಣ ತನ್ನ ಮರಿಯನ್ನ ಎತ್ತಿಕೊಂಡು ಆ ತಾಯಿ ಕೋತಿ ಆಸ್ಪತ್ರೆಗೆ ಹೋಗಿದೆ.

ಇನ್ನು ಆಸ್ಪತ್ರೆಗೆ ಹೋದ ಆ ತಾಯಿ ಕೋತಿ ತನ್ನ ಮುಖ ಭಾಷೆಯಲ್ಲಿ ವೈದ್ಯರ ಬಳಿ ತನ್ನ ಮರಿಯನ್ನ ಕಾಪಾಡಿಕೊಡಿ ಎಂದು ಕೇಳಿಕೊಂಡಿದೆ ಮತ್ತು ಆಕ್ರೋಶದಿಂದ ಕೆಲವರ ಎರಗಿದೆ ಆ ತಾಯಿ ಕೋತಿ. ಇನ್ನು ಈ ತಾಯಿ ಕೋತಿ ಮಾಡುತ್ತಿರುವುದನ್ನ ನೋಡಿದ ಅಲ್ಲಿನ ಜನರು ಕಣ್ಣೀರು ಹಾಕಿದ್ದಾರೆ ಮತ್ತು ವೈದ್ಯರು ಆ ಮರಿಯನ್ನ ಪರಿಶೀಲನೆ ಮಾಡಿದಾಗ ಆ ಕೋತಿ ಮರಿ ಸತ್ತು ಹೋಗಿದೆ ಎಂದು ತಿಳಿದು ಬಂದಿದೆ. ಮನುಷ್ಯನೇ ಆಗಲಿ ಪ್ರಾಣಿನೇ ಆಗಲಿ ತಾಯಿ ಪ್ರೀತಿಗೆ ಬೆಲೆಯನ್ನ ಕಟ್ಟಲು ಸಾಧ್ಯವಿಲ್ಲ, ಮನುಷ್ಯನ ಮಾಡುವ ತಪ್ಪಿನಿಂದ ಪ್ರಾಣಿಗಳು ಬಲಿಪಶುವಾಗುತ್ತಿದೆ ಈ ಸಮಾಜದಲ್ಲಿ. ಸ್ನೇಹಿತರೆ ಈ ತಾಯಿ ಕೋತಿಯ ಪ್ರೀತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.