ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಸಾಮಾಜಿ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಫೋಟೊವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಷ್ಣೋಯಿ ಸಮುದಾಯದ ಮಹಿಳೆಯರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸಹೃದಯವುಳ್ಳಂತವರು. ಅವರು ತಮ್ಮ ಮಕ್ಕಳಂತೆ ಪ್ರಾಣಿ ಹಾಗೂ ಪಕ್ಷಿಗಳನ್ನು ಪೋಷಣೆ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿ ಕೆಲವರು, ಹಳ್ಳಿಯಲ್ಲಿ ಇರುವ ಜನರು ತಮ್ಮ ಸಾಕು ಪ್ರಾಣಿಗಳಾದ ಮೇಕೆ, ಹಸು, ಎಮ್ಮೆ, ಮೊಲ, ನಾಯಿ, ಬೆಕ್ಕು ಎಲ್ಲವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಹೆಸರನ್ನು ಕೂಡ ಇಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ಸಾವಿರಾರು ಜನ ಶೇರ್ ಮಾಡಿದ್ದುು, ಅವರೊಬ್ಬರು ಜಗತ್ತಿನ ಶ್ರೇಷ್ಠ ತಾಯಿ. ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.