ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಮೃತಪಟ್ಟ ಭಿಕ್ಷುಕನ ಮನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿತ್ತು. ಈಗ ವಿದೇಶದ ಭಿಕ್ಷುಕಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ.
ಅರಬ್ ದೇಶದ ಲೆಬನನ್ನ ವಾಫಾ ಮಹಮ್ಮದ್ ಎಂಬ ಭಿಕ್ಷುಕಿಯ ಬ್ಯಾಂಕ್ ಅಕೌಂಟಿನಲ್ಲಿ ಬರೋಬ್ಬರಿ 1.33 ಮಿಲಿಯನ್ ಲೆಬನಾನ್ ಪೌಂಡ್(ಭಾರತೀಯ ರೂಗಳಲ್ಲಿ 5.62 ಕೋಟಿ ರೂ.) ಪತ್ತೆಯಾಗಿದೆ.
ಲೆಬನನ್ನ ಜಮ್ಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಹಣವಿಡಲಾಗಿದ್ದು, ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಸ್ವತಃ ಭಿಕ್ಷುಕಿಗೇ ತಿಳಿದಿರಲಿಲ್ಲ.
ಜೆಟಿಬಿ ಬ್ಯಾಂಕ್ನ ಅಧಿಕಾರಿಗಳು ತಮ್ಮ ಬ್ಯಾಂಕ್ನ ಗ್ರಾಹಕರ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡ ಸಂದರ್ಭದಲ್ಲಿ ಭಿಕ್ಷುಕಿಯ ಹಣ ಎಂದು ಗೊತ್ತಾಗಿದೆ. ಈಕೆ ಆಸ್ಪತ್ರೆಯ ಮುಂದೆ 10ವರ್ಷಗಳಿಂದ ದಿನವಿಡೀ ಭಿಕ್ಷೆ ಬೇಡುತ್ತಿದ್ದು, ಅಲ್ಲಿನ ಸಿಬ್ಬಂದಿಗೆಲ್ಲ ಪರಿಚಿತಳಾಗಿದ್ದಾಳೆ.