ಸುದ್ದಿ

ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಬರೋಬ್ಬರಿ 50ಲಕ್ಷ ಹಣವನ್ನು ನೆರೆ ಸಂತ್ರಸ್ತರಿಗೆ ಕೊಟ್ಟ ಮಹಾನ್ ತಾಯಿ!ಮತ್ತೆ ಮಗಳ ಮದ್ವೆ ಹೇಗೆ?

By admin

August 16, 2019

 ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು

ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.    ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ ಹಣವನ್ನು ಕೂಡಿಟ್ಟಿದ್ದರು. ಆ ಹಣವನ್ನು ಯಾರಿಗೂ ಹೇಳದೆ, ಯಾವುದೇ ರೀತಿಯ ಪ್ರಚಾರ ಮಾಡದೆ ನೇರವಾಗಿ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಹಾಕಿದ್ದಾರೆ ಈ ಮಹಾತಾಯಿ.

ಆದರೆ ಇದರ ವಿಚಾರ ಗೊತ್ತಾದ ಮೇಲೆ ಸುಮನ್ ರಾವ್ ಅವರನ್ನು ಕೇಳಲಾಗಿ ಅವರು ಕೊಟ್ಟ ಪ್ರತಿಕ್ರಿಯೆ ಹೀಗಿತ್ತು..ನಮಗೆ ಯಾವುದೇ ಪ್ರಚಾರ ಮಾಡುವುದು ಬೇಡ. ಏಕೆಂದರೆ ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈ ಗೆ ಗೊತ್ತಾಗಬಾರದು ಎಂದು ಅವರು ಹೇಳಿದ್ದಾರೆ. ಎಲ್ಲರಿಗೂ ಮಾದರಿಯಾಗಿರುವ ಇಂತಹ ಗುಣ ಸ್ವಭಾವದವರು ಇರುವುದು ನೂರಕ್ಕೆ ಒಬ್ಬರಲ್ಲವಾ..

ಮುಂಬೈನಲ್ಲಿ ವಾಸಮಾಡುವ ಸುಮನ್ ರಾವ್ ಅವರ ಪುತ್ರಿ ವಿದೇಶದಲ್ಲಿದ್ದಾರೆ. ಆದರೆ ಡಿಸೆಂಬರ್ ನಲ್ಲಿ ಮಗಳ ಮಾಡುವೆ ಫಿಕ್ಸ್ ಹಾಗಿದ್ದು ಈಗ ಎಲ್ಲಾ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕೊಟ್ಟು ಬಿಟ್ಟಿದ್ದಾರೆ. ಆದರೆ ಈಗ ಮಗಳ ಮದುವೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಬಂತು. ಇದಕ್ಕೆ ಅವರು ಎಷ್ಟು ಸರಳವಾಗಿ ಉತ್ತರ ಕೊಟ್ಟಿದ್ದಾರೆ ಗೊತ್ತಾ.?ಮಗಳ ಮದುವೆಯನ್ನು ರಿಜಿಸ್ಟರ್ ಮದುವೆ ಮಾಡಿದರಾಯ್ತು ಅಂತ ತುಂಬಾ ಸುಲಭವಾಗಿ ಹೇಳಿಬಿಟ್ಟಿದ್ದಾರೆ. ಕರುನಾಡಿನ ನೆರೆಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಸುಮನ್ ರಾವ್ ಅವರು ನಿಜಕ್ಕೂ ಮಹಾತಾಯಿಯೇ.