ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.
- ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ.
- ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ಟ್ಯಾಕ್ಸ್ ಕಟ್ಟಬೇಕಿಲ್ಲ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.
- ಹೈನುಗಾರಿಕೆ ಉತ್ತೇಜನಕ್ಕೆ ಕಾಮದೇನು ಯೋಜನೆ ಜಾರಿ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಾಲ ನೀಡಲಾಗುವುದು.
- 21 ಸಾವಿರ ರೂ.ಗೆ ಸಂಬಳ ಪಡೆಯುವ ಕಾರ್ಮಿಕ ವರ್ಗದವರಿಗೆ 7 ಸಾವಿರ ಬೋನಸ್ ಸಿಗಲಿದೆ. ಗ್ರಾಚ್ಯೂಟಿ ಮೊತ್ತವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.ಕೆಲಸದ ವೇಳೆ ಕಾರ್ಮಿಕ ಮೃತ ಪಟ್ಟರೆ 6 ಲಕ್ಷ ಪರಿಹಾರ.
- ಮನೆ ಖರೀದಿಸುವ ಮಧ್ಯಮ ವರ್ಗದವರಿಗೆ ಜಿಎಸ್ಟಿಯಲ್ಲಿ ವಿನಾಯಿತಿ.ಮನೆ ಮಾಲೀಕ ಬಾಡಿಗೆಯಾಗಿ ಪಡೆಯುವ ಹಣ ಅಂದ್ರೆ ಎರಡನೇ ಮನೆಯ ಮೇಲಿನ ಆದಾಯಕ್ಕೆ ಎರಡು ವರ್ಷ ತೆರಿಗೆ ವಿನಾಯಿತಿ.
- ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಮೆಗಾ ಪೆನ್ಷನ್ ಯೋಜನೆ ಅಡಿ ಕಾರ್ಮಿಕರಿಗೆ 60 ವರ್ಷದ ಬಳಿಕ 3 ಸಾವಿರ ರೂ. ಪ್ರತಿ ತಿಂಗಳು ಮಾಸಿಕ ಪಿಂಚಣಿ ಸಿಗಲಿದ್ದು, ಇದರಿಂದ 10 ಕೋಟಿ ಕಾರ್ಮಿಕರಿಗೆ ಲಾಭ ಸಿಗಲಿದೆ.
- ಗೃಹ ಸಾಲ 2 ಲಕ್ಷದರೆಗೂ ತೆರಿಗೆ ವಿನಾಯಿತಿ ನೀಡಲಾಗಿದ್ದು,2.5 ಲಕ್ಷದವರೆಗೂ ಮನೆ ಬಾಡಿಗೆಗೆ ತೆರಿಗೆ ಕಟ್ಟುವಂತಿಲ್ಲ.ಈ ಮೊದಲು 1.80 ಲಕ್ಷದವರೆಗೆ ಮಾತ್ರ ಇತ್ತು.
- ಕೇಂದ್ರ ಸರ್ಕಾರದ ಈ ಬಜೆಟ್ ನಲ್ಲಿ ಬ್ಯಾಂಕ್ ಮತ್ತು ಅಂಚೆ ಕಚೇರಿ ಠೇವಣಿಯ ಟಿಡಿಎಸ್ ಮಿತಿ ೧೦ ಸಾವಿರದಿಂದ ೪೦ ಸಾವಿರಕ್ಕೆ ಏರಿಕೆ.