ರಾಜಕೀಯ

ಮೋದಿ ನೇತೃತ್ವದ: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 2 ದಿನದಲ್ಲಿ 3.86 ಲಕ್ಷ ಕೋಟಿ ರೂ. ಲಾಭ!

By admin

May 28, 2019

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ.

ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ ಸೆನ್ಸೆಕ್ಸ್‌ ದಿನದ ವಹಿವಾಟನ್ನು 248.57 ಅಂಕಗಳ ಏರಿಕೆಯೊಂದಿಗೆ 39,683.29 ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು. ಇದರ ಪರಿಣಾಮ ಹೂಡಿಕೆದಾರರಿಗೆ 3.86 ಲಕ್ಷ ಕೋಟಿ ರೂ. ಲಾಭ ಆಗಿದೆ.

ಇದೇ ರೀತಿ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 80.65 ಅಂಗಕಳ ಜಿಗತವನ್ನು ದಾಖಲಿಸಿ ದಿನದ ವಹಿವಾಟನ್ನು 11,924.75ರ ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಶೇ.5.78ರ ಜಿಗಿತವನ್ನು ದಾಖಲಿಸಿ ಅತೀ ದೊಡ್ಡ ಗೇನರ್‌ ಎನಿಸಿಕೊಂಡಿತು.

ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಒಟ್ಟು ಕಂಪೆನಿಗಳ 2,766 ಷೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,793 ಷೇರುಗಳು ಮುನ್ನಡೆ ಸಾಧಿಸಿದರೆ, 785 ಷೇರುಗಳು ಹಿನ್ನಡೆಗೆ ಗುರಿಯಾದವು. 188 ಷೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.