ಉಪಯುಕ್ತ ಮಾಹಿತಿ

ನಿಮ್ಮ ಮೊಬೈಲ್ ಕಳೆದು ಹೋದರೆ, ತಲೆಕೆಡಿಸಕೊಳ್ಳಬೇಡಿ ಜಸ್ಟ್ ಹೀಗೆ ಮಾಡಿ ಸಾಕು. ನಿಮ್ಮ ಮೊಬೈಲ್ ಸಿಗುತ್ತದೆ..!

By admin

December 20, 2019

ನಮ್ಮ ಜೀವನದ ಒಂದು ಭಾಗವಾಗಿರುವ ಮೊಬೈಲ್ ಕಳೆದು ಹೋದರೆ ಏನಾಗಬಹುದು.. ಅಬ್ಬಾಬ ನೆನೆಸಿಕೊಳ್ಳುವುದು ಕೂಡ ಕಷ್ಟದ ಕೆಲಸವಾಗಿದೆ.. ಇನ್ನು ಪರ್ಸನಲ್ ಇನ್ಫಾರ್ಮೇಶನ್ ಜೊತೆಗೆ ನಮ್ಮ ಹಲವಾರು ಡೇಟಾ ಗಳು ಮೊಬೈಲ್ ನಲ್ಲಿಯೇ ಇರುತ್ತವೆ.. ಅಕಸ್ಮಾತ್ ನಮ್ಮ ಮೊಬೈಲ್ ಕಳೆದು ಹೋದರೆ.. ಮೊಬೈಲ್ ನಲ್ಲಿರುವ ಡೇಟಾ ಮಿಸ್ ಯೂಸ್ ಆದರೂ ಆಗಬಹುದು… ಕಳೆದುಹೋದ ಮೊಬೈಲ್ ನಲ್ಲಿನ ಡೇಟಾ ಇನ್ಫಾರ್ಮೇಶನ್ ಅನ್ನು ಸುಲಭವಾಗಿ ಡಿಲೀಟ್ ಮಾಡಬಹುದು ಜೊತೆಗೆ ಮೊಬೈಲ್ ಎಲ್ಲಿದೆ ಎಂಬ ಇನ್ಫಾರ್ಮೇಶನ್ ಪಡೆಯಬಹುದು. ಆದರೆ ಈಗ ನಾವು ನಿಮಗೋಸ್ಕರ ನೀವು ಬಹಳ ಪ್ರೀತಿಸುವ ನಿಮ್ಮ ಮೊಬೈಲ್ ಏನಾದರು ಕಳೆದುಹೋದರೆ ಹುಡುಕುವ ಒಂದು ಸುಲಭ ಮಾರ್ಗ ತಿಳಿಸುತ್ತೇವೆ ನೋಡಿ.

ಎಲ್ಲರಿಗು ಇರುವ ಇನ್ನೊಂದು ದೊಡ್ಡ ಚಿಂತೆ ಎಂದರೆ ಮೊಬೈಲ್ ನಲ್ಲಿರುವ ಡೇಟ್, ಹೌದು ಮೊಬೈಲ್ ಕಳೆದು ಹೋದರೆ ಅದರಲ್ಲಿರುವ ಚಿತ್ರಗಳು, ವೀಡಿಯೊಗಳು ದುರುಪಯೋಗ ಆಗುವ ಸಂಭವವಿರುತ್ತದೆ.

ಇದಕೆಲ್ಲ ಒಂದು ಪರಿಹಾರ ಈಗ ಸಿಕ್ಕಿದೆ android.com/find ಈ ವೆಬ್ಸೈಟ್ ತೆರೆದು ನೀವು ನಿಮ್ಮ ಜಿ ಮೇಲ್ ಅಕೌಂಟ್ ಮೂಲಕ ಲಾಗಿನ್ ಆಗಬೇಕಾಗುತ್ತದೆ, ಲಾಗಿನ್ ಆದ ಕೂಡಲೇ ನೀವು ಬಳಸುತ್ತಿದ ಎಲ್ಲ ಮೊಬೈಲ್ ಗಳ ಲಿಸ್ಟ್ ತೋರಿಸುತ್ತದೆ, ಆಲ್ಲಿ ನೀವು ನಿಮ್ಮ ಹಳೆಯ ಕಳೆದು ಹೋದ ಡಿವೈಸ್ಅನ್ನು ಆಯ್ಕೆಮಾಡಿಕೊಳ್ಳಿ.

ನಂತರ ಗೂಗಲ್ ಮ್ಯಾಪ್ ನ ಸಹಾಯದಿಂದ ನಿಮ್ಮ ಕಳೆದು ಹೋದ ಮೊಬೈಲ್ ಎಲ್ಲಿದೆ ಅಂದರೆ ಯಾವ ಸ್ಥಳದಲ್ಲಿದೆ ಎಂದು ನೀವು ನೋಡಬಹುದು. ಹಾಗೆ SET UP LOCK & ERASE ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಲ್ಲಿರುವ ಡಾಟಾ ಕೂಡ ಇದರ ಮೂಲಕವೇ ಡಿಲೀಟ್ ಕೂಡ ಮಾಡಬಹುದು.