ಸುದ್ದಿ

Month End Mobiles Fest: ಫ್ಲಿಪ್‌ಕಾರ್ಟ್ ಆಫರ್ ಸೇಲ್…!

By admin

July 29, 2019

ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಕೊನೆಯ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ. ಬುಧವಾರ ಜುಲೈ 31ರವರೆಗೆ ನಡೆಯುವ ವಿಶೇಷ ಸೇಲ್‌ನಲ್ಲಿ ಗೂಗಲ್ ಪಿಕ್ಸೆಲ್ 3, ಮೋಟೋರೋಲ ಒನ್ ಪವರ್, ಹೊನೊರ್ 9N, ಪೋಕೋ F1 ಮತ್ತು ನೋಕಿಯಾ 6.1 ಮೇಲೆ ವಿಶೇಷ ಆಫರ್ ಸೇಲ್ ಘೋಷಿಸಲಾಗಿದೆ. 

ಅಲ್ಲದೆ ಹೊನೊರ್ ಸರಣಿಯ ಫೋನ್‌ ಮೇಲೂ ಆಕರ್ಷಕ ಡಿಸ್ಕೌಂಟ್ ಪ್ರಕಟಿಸಲಾಗಿದೆ. 

ಹೊನೊರ್ 10 Lite, ಹೊನೊರ್ 7s, ಹೊನೊರ್ 9i ಮತ್ತು ಹೊನೊರ್ 9 Lite ಮಾದರಿ ಡಿಸ್ಕೌಂಟ್‌ನಲ್ಲಿ ದೊರೆಯುತ್ತದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9, ಒಪ್ಪೋ ರೆನೋ 10x ಝೂಮ್, ಏಸಸ್ 6Z, ಬ್ಲ್ಯಾಕ್‌ ಶಾರ್ಕ್‌ 2 ಮತ್ತು ಐಫೋನ್ 8 Plus ಮೇಲೂ ಆಫರ್ ಸೇಲ್ ಇರಲಿದೆ. 

ಅದರ ಜತೆಗೆ ಎಕ್ಸ್‌ಚೇಂಜ್ ಆಫರ್, ನೋ ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಕೊಡುಗೆಗಳೂ ದೊರೆಯುತ್ತವೆ.