ಸುದ್ದಿ

ಕಾಡಿನ ನಾಶವಾಗುತ್ತಿರುವ ಹಿನ್ನೆಲೆ ಬಗ್ಗೆ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದೇನು..?

By admin

August 27, 2019

ನೀರಿನ  ಸಂರಕ್ಷಣೆಗಾಗಿ ನ್ಯೂಸ್ ​18 ಹಮ್ಮಿಕೊಂಡಿರುವ  #Mission Paani ಆಂದೋಲನ  ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು.

ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. 2016ರಲ್ಲಿಯೂ ಸಹ ತಮಿಳುನಾಡಿನಲ್ಲಿ ಬರಗಾಲ ಬಂದಿತ್ತು. ಇದು ಹೀಗೆಯೇ ಮುಂದುವರೆದರೆ ನಮ್ಮ ವಿನಾಶ ನಿಶ್ಚಿತ. ಹಾಗಾಗಿ ನೀರನ್ನು ಉಳಿಸುವ ಕೆಲವೊಂದು ಕಾರ್ಯಗಳನ್ನು ಮಾಡಬೇಕಿದೆ ಎಂದರು.

ಮಳೆ ನೀರು ಕೊಯ್ಲು: ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದೆ. ನದಿ, ಕೊಳ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವುದರ ಜೊತೆಗೆ ಮುಖ್ಯವಾಗಿ ನೀರಿನ ಮೂಲವಾದ ಮಳೆ ನೀರನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಳೆನೀರು ಕೊಯ್ಲು ಮೂಲಕ ಮಳೆ ನೀರನ್ನು ವರ್ಷಪೂರ್ತಿ ನಮ್ಮ ಬಳಕೆಗೆ ಹಿಡಿದಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸದ್ಗುರು ಅವರು ಮಾತನಾಡುತ್ತಾ ತಮಿಳಿನ ಗಾದೆಯೊಂದನ್ನು ಹೇಳಿದರು. ‘ಕಾವೇರಿ ನಡೆದುಕೊಂಡು ಬಂದರೆ ಮಾತ್ರ ಅವಳು ಅದೃಷ್ಟಲಕ್ಷ್ಮಿ. ಅವಳೇನಾದರೂ ಧಾವಿಸಿ ಬಂದರೆ ಭದ್ರಕಾಳಿ’ ಎಂದು ಹೇಳಿದರು. ಕಾಡು ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು.

 ರಾಷ್ಟ್ರ ರಾಜಧಾನಿಯಲ್ಲೇ ನೀರಿನ ಬವಣೆ ಹೆಚ್ಚು; ಬಡವರ ಗೋಳು ಕೇಳುವವರಿಲ್ಲ, ನೀರಿನ ಕೊರತೆ ಬೇಸಿಗೆಯಲ್ಲಿ ಮಾತ್ರ ಗಮನಹರಿಸಬೇಕಾದ ವಿಷಯವಲ್ಲ. ಮಳೆಗಾಲದಲ್ಲಿಯೇ ಹರಿದು ಹೋಗುವ ನೀರನ್ನು ಸಂರಕ್ಷಿಸಿ, ಮುಂದಿನ ದಿನಗಳಿಗೆ ಹಿಡಿದಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದಕ್ಕೆ ಚೆನ್ನೈ ನಗರವನ್ನು ಉದಾಹರಣೆಯನ್ನಾಗಿ ನೀಡಿದ ಅವರು, ಒಂದಾನೊಂದು ಕಾಲದಲ್ಲಿ ಚೆನ್ನೈನಲ್ಲಿ 1500 ಕೆರೆಗಳಿದ್ದವು. ಆದರೆ ಈಗ ಒಂದು ಕೆರೆಯೂ ಸಹ ಇಲ್ಲ. ಇದಕ್ಕೆ ಕಾರಣ ಕೆರೆಗಳಿದ್ದ ಜಾಗದಲ್ಲಿ ನಗರಗಳನ್ನು ನಿರ್ಮಿಸಿರುವುದು ಎಂದರು.