inspirational

Human Brain: ಆಲೋಚಿಸಿದ್ರೆ ಸಾಕು, ಅದು ಅಕ್ಷರವಾಗಿ ಬದಲಾಗುತ್ತೆ…ಮೆದುಳಿನ ವಿಶಿಷ್ಟ ಶಕ್ತಿ ಬಳಸಿ ಬರೆದ ಸ್ಟ್ರೋಕ್​​ ರೋಗಿ !

By Raj Rao

November 22, 2021

ಕತ್ತಿನ ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯನ್ನು ಹೊಂದಿರುವ 65 ವರ್ಷದ ವೃದ್ಧರೊಬ್ಬರು ಕೈ ಚಲನೆಯನ್ನು ಊಹಿಸಿಕೊಳ್ಳುವ ಮೂಲಕ ಬರವಣಿಗೆಯನ್ನು ಸಾಧಿಸಿದ್ದಾರೆ. ಬ್ರೈನ್‌ ಕಂಪ್ಯೂಟರ್ ಇಂಟರ್ಫೇಸ್ (BCI) ಸಾಧನವನ್ನು ಬಳಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಮೆದುಳು ಪಠ್ಯದ ಮೂಲಕ ಸಂವಹನವನ್ನು ಸಾಧಿಸಿದೆ. ಅಮೆರಿಕದ ನರವಿಜ್ಞಾನಿಗಳು ಈ ಸಾಧನೆಯನ್ನು ಸಂಶೋಧನಾ ಸಹಯೋಗಿ ಬ್ರೈನ್‌ಗೇಟ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದಾರೆ.

ಬ್ರೈನ್‌ ಕಂಪ್ಯೂಟರ್ ಇಂಟರ್ಫೇಸ್ ಎನ್ನುವ ಸಾಧನವು ಮೆದುಳಿನ ಮೇಲೆ ಚಿಪ್‌ಗಳಿಂದ ಕಾರ್ಯ ನಿರ್ವಹಿಸುತ್ತದೆ. ಅದು ಬಳಕೆದಾರರು ಯೋಚಿಸಿದಾಗ ಮೆದುಳಿನ ಚಟುವಟಿಕೆಯನ್ನು ಪತ್ತೆ ಮಾಡುತ್ತದೆ ಮತ್ತು ಅದನ್ನು ಕಂಪ್ಯೂಟರ್‌ನಿಂದ ಓದಬಲ್ಲ ಸಂಕೇತಗಳಾಗಿ ಭಾಷಾಂತರಿಸುತ್ತದೆ. ಇದನ್ನು ಅಳವಡಿಸಿರುವ ವ್ಯಕ್ತಿ ತಾನು ಬರೆಯುತ್ತಿದ್ದೇನೆ ಎಂದು ಊಹಿಸಿದಾಗ ಬ್ರೈನ್ ಚಿಪ್‌ನಲ್ಲಿರುವ ಸೆನ್ಸಾರ್ಗಳು ಆತನ ನ್ಯೂರಾನ್‌ಗಳಿಂದ ಸಿಗ್ನಲ್‌ಗಳನ್ನು ತೆಗೆದುಕೊಳ್ಳುತ್ತವೆ. ಈ ಸಿಗ್ನಲ್‌ಗಳು ಮೆಷಿನ್ ಲರ್ನಿಂಗ್ ಆಲ್‌ಗರಿದಮ್ಸ್‌ನಿಂದ ಗುರುತಿಸಿಕೊಂಡು ನೈಜ ಸಮಯದಲ್ಲಿ ನೀಡುತ್ತದೆ.

ಈ ಇಂಟರ್ಫೇಸ್ ಬಳಸಿಕೊಂಡು ಕಂಪ್ಯೂಟರ್ ನೇರವಾಗಿ ವ್ಯಕ್ತಿಯ ಮೆದುಳಿನಿಂದ ಬರುವ ಸೂಚನೆಗಳನ್ನು ಅನುಸರಿಸುತ್ತದೆ. ಆ ಮೂಲಕ ಆ ವ್ಯಕ್ತಿಯೂ ಅದನ್ನು ಯೋಚಿಸುತ್ತಾ, ಕಂಪ್ಯೂಟರ್ ಮೂಲಕ ಆ ಕೆಲಸವನ್ನು ಮಾಡಬಹುದು. ಈ ಪ್ರಕರಣದಲ್ಲಿ ವ್ಯಕ್ತಿಯ ಕೈಗಳು ಬೆನ್ನು ಹುರಿ ಗಾಯದಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಕೈಗಳ ಚಲನೆಯನ್ನು ಊಹಿಸಿಕೊಂಡಿದ್ದಾರೆ. ಆ ಮೂಲಕ ಒಂದು ನಿಮಿಷದಲ್ಲಿ 90 ಅಕ್ಷರಗಳನ್ನು ಶೇಕಡಾ 94 ರಷ್ಟು ನಿಖರವಾಗಿ ಬರೆಯಲು ಸಾಧ್ಯವಾಗಿದೆ.

ಆಫ್‌ಲೈನ್‌ ಜೆನೆರಲ್ ಪರ್ಪಸ್ ಸ್ವಯಂ ತಿದ್ದುವಿಕೆಯಿಂದ ನಿಖರತೆಯೂ ಶೇಕಡಾ 99 ರಷ್ಟು ಇತ್ತು. ಇದು ದೊಡ್ಡ ಸಾಧನೆಯಾಗಿದ್ದು, ಒಂದು ನಿಮಿಷದಲ್ಲಿ 115 ಅಕ್ಷರಗಳಿಗೆ 90 ಅಕ್ಷರಗಳ ಸಾಮರ್ಥ್ಯವನ್ನು ಹೋಲಿಸಬಹುದಾದ ಕಾರಣ ಇದು ನಿಜವಾಗಿಯೂ ಅತ್ಯುತ್ತಮ ಸಾಧನೆಯಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಈ ವಯಸ್ಸಿನ ವ್ಯಕ್ತಿಯ ಟೈಪಿಂಗ್ ವೇಗವನ್ನು ಗಮನಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಈ ಸಾಧನೆಯೂ ಹಿಂದಿನ ‘ಮೆದುಳಿನಿಂದ ಪಠ್ಯದವರೆಗಿನ ಸಂವಹನ’ದ ದಾಖಲೆಗಳಿಗಿಂತ ದುಪ್ಪಟ್ಟಾಗಿದೆ. ಹೊಸ ವ್ಯವಸ್ಥೆಯು ಪಾರ್ಶ್ವವಾಯು ಪೀಡಿತರಿಗೆ ತಮ್ಮ ದೈನಂದಿನ ಜೀವನದಲ್ಲಿ ಕಷ್ಟ ಪಡದೇ ಸರಾಗವಾಗಿ ಸಂವಹನ ನಡೆಸಲು ಸಕ್ರಿಯಗೊಳಿಸುವ ಮೂಲಕ ಸಹಾಯ ಮಾಡುತ್ತದೆ’ ಎಂದು ವಿಜ್ಞಾನಿಗಳು ನಂಬಿದ್ದಾರೆ. ಮಾತು, ಸ್ಕ್ರೋಲಿಂಗ್, ಪಾಯಿಂಟಿಂಗ್ ಮತ್ತು ಕ್ಲಿಕ್ ಮಾಡುವಂತಹ ಇತರ ಕಾರ್ಯಗಳಿಗೆ ಅನುಕೂಲವಾಗುವಂತಹ ಸಮಗ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಈ ಯಶಸ್ಸು ಕಾರಣವಾಗುತ್ತದೆ.

ಇನ್ನು ಈ ಅಧ್ಯಯನವು ಮೇ 12 ರಂದು Nature ನಲ್ಲಿ ಪ್ರಕಟವಾಗಿದೆ. ಸ್ಪೇಸ್ ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ‘ಮೆದುಳಿನಿಂದ ಬ್ರೈನ್ ಟು ಮೆಷಿನ್ ಇಂಟರ್ಫೇಸ್’ ಎನ್ನುವ ನ್ಯೂರೋ ಲಿಂಕ್ ಅನ್ನು ಸೆಪ್ಟೆಂಬರ್ 2020 ರಂದು ಅನಾವರಣಗೊಳಿಸಿದ ನಂತರ ಬ್ರೈನ್ ಚಿಪ್‌ಗಳು ಕಳೆದ ವರ್ಷವೂ ಸುದ್ದಿಯಲ್ಲಿತ್ತು.

Published by : Mayoon N / Biotechnologist / Director of DRM Career Build Center, kolar.