ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ.
ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಆರ್ ಸಿ, ಹೂಡಾ ಸಿಟಿ ಸೆಂಟರ್ ಮತ್ತು ಸುಲ್ತಾನಪುರ, ಸಮಯಪುರ ಬಾದಲಿ ಮತ್ತು ಕುತುಬ್ ಮಿನಾರ್ ಮಾರ್ಗ ಮಧ್ಯೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಸುಲ್ತಾನಪುರ ಮತ್ತು ಕುತುಬ್ ಮಿನಾರ್ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಹಳದಿ ಮಾರ್ಗದ ಮೆಟ್ರೋ ರೈಲು ಬೆಳಗ್ಗೆ ಸುಲ್ತಾನಪುರ ತಲುಪುವುದರಲ್ಲಿತ್ತು. ರೈಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಓವರ್‍ಹೆಡ್ ವಯರ್ ಕಡಿತಗೊಂಡಿದೆ. ಹೀಗಾಗಿ ಮೆಟ್ರೋ ಸಂಚಾರದಲ್ಲಿ ಅಸ್ತವ್ಯಸ್ತ ಕಂಡು ಬಂದಿದೆ. ಡಿಎಂಆರ್ ಸಿ ಸಿಬ್ಬಂದಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.