ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ.
ಈಗ ಇದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೂ 3.1 ಕಿ.ಮೀ ಡಬಲ್ ಡೆಕ್ಕರ್ ಟ್ರ್ಯಾಕ್ ಬರಲಿದೆ. ಸದ್ಯ ಜಯದೇವ ಮುಂಭಾಗ ಕಾಮಗಾರಿ ನಡೆಯುತ್ತಿದ್ದು, ಈ ಪ್ರಕಾರ ಫ್ಲೈಓವರ್ ಒಡೆಯಲಾಗುತ್ತದೆ. ನಂತರ ಇದೇ ಮಾರ್ಗದಲ್ಲಿ ನೆಲಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕ್ ಎಂದರೆ ಲಘು ವಾಹನಗಳು ಸಂಚಾರಕ್ಕೆಂದು ರೋಡ್ ತಲೆಯೆತ್ತಲಿದೆ. ಹಾಗೇ ಭಾಗಶಃ ಅಂತರ ನೀಡಿ ಮತ್ತೆ ಅದೇ ಪಿಲ್ಲರ್ ಮೇಲೆ ಮೆಟ್ರೋ ಥರ್ಡ್ ಲೈನ್ ಸಿಸ್ಟಂ ಅಳವಡಿಸಿ ಎಲಿವೇಟೆಡ್ ಟ್ಯ್ರಾಕ್ ಮಾಡಲಾಗುತ್ತದೆ. ಇದರಿಂದ ಒಂದೇ ಖರ್ಚಿನಲ್ಲಿ ರಸ್ತೆ ಮೇಲಿನ ವಾಹನಗಳ ಒತ್ತಡ ನಿಯಂತ್ರಣ ಮಾಡಬಹುದಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಬೆಂಗಳೂರು ವಾಹನ ಸವಾರರಿಗೆ ಮಾಹಿತಿಯೊಂದು ಇಲ್ಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕರ್ ಆಗಿ ಸಂಚಾರ ಸೇವೆಯನ್ನು ನೀಡಲಿವೆ. ಈ ಮೂಲಕ ಸಿಲಿಕಾನ್ ಬೆಂಗಳೂರಿಗೆ ಮತ್ತೊಂದು ಗರಿ ಸೇರಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಲಘು ವಾಹನ, ಕಾರು ಬೈಕುಗಳು ಸಂಚರಿಸುವ ಡಬಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ರೋಡ್ ಲೈನ್ ನಿರ್ಮಿಸಲಾಗಿದೆ.
ಅದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಮೂರು ಕಿಲೋಮೀಟರ್ ಡಬಲ್ ಡೆಕ್ಕರ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಜಯದೇವ ಆಸ್ಪತ್ರೆ ಮುಂಭಾಗ ಕಾಮಗಾರಿ ಭರದಿಂದ ಸಾಗಿದೆ. ಫ್ಲೈಓವರ್ ಒಡೆದು ಇದೇ ಮಾರ್ಗದಲ್ಲಿ ನೆಲ ಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕು ಸೇರಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ನಿಗದಿತ ಅಂತರದಲ್ಲಿ ಮತ್ತೊಂದು ಪಿಲ್ಲರ್ ಅಳವಡಿಸಿ ಮೆಟ್ರೋ ಲೈನ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಟ್ರ್ಯಾಕ್ ನಿರ್ಮಾಣ ಮಾಡಲಿದ್ದು ಒಂದೇ ಖರ್ಚಿನಲ್ಲಿ 2 ಮಾರ್ಗ ನಿರ್ಮಾಣವಾಗಲಿವೆ ಎನ್ನಲಾಗಿದೆ.