ಸುದ್ದಿ

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ,…ಏನೆಂದು ತಿಳಿಯಿರಿ?

By admin

May 31, 2019

ರಾಜ್ಯ ರಾಜಧಾನಿಯ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಕರೆ ಬಂದಿದ್ದು, ನಿಲ್ದಾಣದಲ್ಲಿದ್ದ ರೈಲಿನಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ.ಇಂದು ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಯನ್ನು ಮಾಡಿದ್ದರು. ಇದೇ ವೇಳೆ ನಿಲ್ದಾಣದಲ್ಲಿದ್ದ ಪಾಟ್ನಾ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬಂದು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ.

ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ಪೊಲೀಸರು ಶ್ವಾನ ದಳದೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಅವರಿಗೆ ಗ್ರೇಡ್ ಮಾದರಿಯ ವಸ್ತುವೊಂದು ರೈಲ್ವೇ ನಿಲ್ದಾಣದ ಸಮೀಪ ದೊರಕಿದೆ. ಕೂಡಲೇ ರೈಲ್ವೇ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರೀಯ ದಳ ತಂಡ ಅದನ್ನು ದೂರ ತೆಗೆದುಕೊಂಡು ಹೋಗಿ ಪರಿಶೀಲಿಸಿದ್ದಾರೆ. ಸದ್ಯ ಈ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರೈಲ್ವೇ ನಿಲ್ದಾಣದಲ್ಲಿ ಏನೂ ಆಗಿಲ್ಲ. ಸುಮ್ಮನೆ ಆತಂಕ ಪಡುವ ಅಗತ್ಯವಿಲ್ಲ. ರೈಲಿಗೆ ಬಳಕೆ ಮಾಡುವ ಹಳೆಯ ಗ್ರೆನೇಡ್ ರೀತಿಯ ವಸ್ತು ಪತ್ತೆಯಾಗಿದೆ ಅಷ್ಟೇ. ಹೀಗಾಗಿ ಪ್ರಯಾಣಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಇದರಲ್ಲಿ ಸ್ಫೋಟಕ ವಸ್ತುಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರೈಲ್ವೇ ನಿಲ್ದಾಣದ ಪ್ರಯಾಣಿಕರು ಆತಂಕಕ್ಕೆ ಒಳಗಾಗಬೇಡಿ. ಅಲ್ಲದೇ ಇಂತಹ ವಸ್ತುಗಳು ಇನ್ನೂ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಂಬ್ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಅಂತಹ ಯಾವುದೇ ವಸ್ತು ಸಿಕ್ಕಿಲ್ಲ ಎಂದು ರೈಲ್ವೇ ಎಸ್‍ಪಿ ರಾಜಪ್ಪ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.ಒಟ್ಟಿನಲ್ಲಿ ಫ್ಲಾಟ್ ಫಾರಂ 1ರಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾಗಿದ್ದು, ಈ ವಿಚಾರ ತಿಳಿದಯುತ್ತಿದ್ದಂತೆಯೇ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಅಲ್ಲಿಂದ ಜಾಗ ಖಾಲಿ ಮಾಡಲು ಯತ್ನಿಸಿದ್ದಾರೆ.