ಸುದ್ದಿ

ಇನ್ನುಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯಬೇಕೆಂದರೆ ಇದನ್ನು ಪಾಲಿಸಲೇಬೇಕು..!ಏನದು?

By admin

November 11, 2019

ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್‌ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್  ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ ಬರಲಿದೆ. ರಾಜ್ಯ ವಿಧಾನ ಸಭೆಯ ಮುಂದಿನ ಅಧಿವೇಶನದಲ್ಲಿ ಇದನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಎನ್‌ಜಿಒಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮೇಘಾಲಯದ ನಿವಾಸಿಯಲ್ಲದ ಮತ್ತು ರಾಜ್ಯದಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಇರಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ ಸರ್ಕಾರಕ್ಕೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದನ್ನು ಅವರ ಸ್ವಂತ ಹಿತಾಸಕ್ತಿಗಾಗಿ ಹಾಗೂ ಸರ್ಕಾರ ಮತ್ತು ಮೇಘಾಲಯದ ಜನರ ಹಿತ ದೃಷ್ಟಿಯಿಂದ ಮಾಡಲಾಗುತ್ತದೆ. ಅವರು ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂದರು.

ಕೇಂದ್ರ,ರಾಜ್ಯ ಮತ್ತು ಜಿಲ್ಲಾ ಮಂಡಳಿಗಳ ನೌಕರರನ್ನು ಕಾಯಿದೆಯ ವ್ಯಾಪ್ತಿಯಿಂದ ಮುಕ್ತಗೊಳಿಸಲಾಗಿದೆ ಎಂದರು. ಮೇಘಾಲಯ ನಿವಾಸಿಗಳು, ಸುರಕ್ಷತೆ ಮತ್ತು ಭದ್ರತಾ ಕಾಯ್ದೆ, 2016 (ಎಂಆರ್‌ಎಸ್‌ಎಸ್‌ಎ)ಯನ್ನು ಆಗಿನ ಕಾಂಗ್ರೆಸ್ ನೇತೃತ್ವದ ಎಂಯುಎ- II ಸರ್ಕಾರವು ಅಕ್ರಮ ವಲಸೆಯನ್ನು ಪರಿಶೀಲಿಸುವ ಸಮಗ್ರ ಕಾರ್ಯ ವಿಧಾನಗಳ ಭಾಗವಾಗಿ ಅಂಗೀಕರಿಸಿತು.