ಸುದ್ದಿ

ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

76

ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ ಶಾಲೆಯ ಮೂಲಕವೇ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಇದರ ಜತೆಗೆ ಆಧಾರ್‌ ನಕಲು ಪ್ರತಿ ನೀಡಬೇಕು.

ಎಸೆಸೆಲ್ಸಿ ಅಂಕಪಟ್ಟಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ಮೊಬೈಲ್‌ ಸಂಖ್ಯೆಯ ಜತೆಗೆ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್‌ ಸಂಖ್ಯೆ ಯನ್ನು ಕಡ್ಡಾಯವಾಗಿ ನಮೂದಿಸಲೇ ಬೇಕು. ಮಂಡಳಿಯಿಂದ ಶಾಲೆಗೆ ಬಂದಿರುವ ಅಂಕಪಟ್ಟಿಯನ್ನು ಅಭ್ಯರ್ಥಿಗಳಿಗೆ ವಿತರಣೆ ಮಾಡುವಾಗ ಅಭ್ಯರ್ಥಿಯ ವಿಳಾಸ, ನೋಂದಣಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆಯಾರಿಗೂ ಅಂಕಪಟ್ಟಿ ನೀಡಕೂಡದು ಎಂದು ಮಂಡಳಿಯಿಂದ ಎಚ್ಚರಿಕೆಯನ್ನು ನೀಡಲಾಗಿದೆ. ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅದೇ ಶೈಕ್ಷಣಿಕ ವರ್ಷದಲ್ಲಿ ಅಂಕಪಟ್ಟಿ ವಿತರಣೆ ಮಾಡಲಾಗುತ್ತದೆ. ಆದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಥವಾ ಪೂರಕ ಪರೀಕ್ಷೆಯನ್ನು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಖಾಸಗಿ ಅಭ್ಯರ್ಥಿಗಳಿಗೆ, ಪುನರಾವರ್ತಿತ ಅಭ್ಯರ್ಥಿಗಳಿಗೆ ಅಂಕಪಟ್ಟಿ ವಿತರಣೆ ಸ್ವಲ್ಪ ವಿಳಂಬವಾಗುತ್ತದೆ.

ಏಕೆ ಈ ಕ್ರಮ? : ವಿದ್ಯಾರ್ಥಿ ವ್ಯಾಸಂಗ ಮಾಡಿದ ಶಾಲೆಯಿಂದಲೇ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಎರಡನೇ, ಮೂರನೇ ಅಥವಾ ನಾಲ್ಕನೇ ಅಂಕಪಟ್ಟಿಗೆ ಅಥವಾ ತಿದ್ದುಪಡಿ ಅಂಕಪಟ್ಟಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಅರ್ಜಿಯನ್ನು ಸರಿಯಾಗಿ ಪರಿಶೀಲನೆ ಮಾಡದೆ, ಅಪೂರ್ಣ ಮಾಹಿತಿಯನ್ನು ಅರ್ಜಿಯನ್ನು ಮತ್ತು ಅಭ್ಯರ್ಥಿಗಳಿಗೆ ಅಂಕಪಟ್ಟಿ ನೀಡುವಾಗ ತಪ್ಪುಗಳಿರುವುದನ್ನು ಪರಿಶೀಲಿಸದೆ ನೀಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಮುಖ್ಯಶಿಕ್ಷಕರಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದರು.

ಎಚ್ಚರ ವಹಿಸಿ! : ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿಯಲ್ಲಿ ಹಲವು ರೀತಿಯಲ್ಲಿ ಲೋಪವಾಗುತ್ತಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿ ವಿತರಣೆಗೆ ಮುನ್ನ ಸೂಕ್ಷ್ಮ ಪರಿಶೀಲನೆ ಮಾಡಬೇಕು ಎಂದಿದೆ ಪ್ರೌಢಶಿಕ್ಷಣ ಮಂಡಳಿ. ಅಂಕಪಟ್ಟಿಯಲ್ಲಿನ ಅಭ್ಯರ್ಥಿ, ತಂದೆ, ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ ತಪ್ಪುಗಳಾಗಿದ್ದಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದಾಗ ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ವಿದ್ಯಾರ್ಥಿಯು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ನೀಡಿರುವ ದಾಖಲೆಗಳನ್ನೇ ಪ್ರೌಢಶಾಲೆಗೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ಒಂದು ರೀತಿಯ ದಾಖಲೆ ಹಾಗೂ ಪ್ರೌಢಶಾಲೆಗೆ ಇನ್ನೊಂದು ರೀತಿಯ ದಾಖಲೆ ನೀಡಿದರೆ ಅಂತಹ ಪ್ರಸ್ತಾವನೆಯನ್ನು ಮಂಡಳಿಗೆ ಸಲ್ಲಿಸುವ ಮೊದಲು ಎಲ್ಲ ನಿಯಮಗಳನ್ನು ಸರಿಯಾಗಿ ಅರಿತುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಮಂಡಳಿ ಖಡಕ್‌ ಎಚ್ಚರಿಕೆ ನೀಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಸ್ಪೂನ್ ಬಿಡಿ…ಕೈ ನಲ್ಲಿ ಊಟ ಮಾಡಿ…ಆಮೇಲೆ ನೋಡಿ ಏನ್ ಲಾಭ ಆಗುತ್ತೆ ಅಂತಾ..!ತಿಳಿಯಲು ಈ ಲೇಖನ ಓದಿ…

    ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು

  • ಸುದ್ದಿ

    ನಗರಸಭೆ ಚುನಾವಣೆಗೂ ಮುಂಚಿತವಾಗಿಯೇ ಖಾತೆಯನ್ನು ತೆರೆದ ಜೆಡಿಎಸ್ ಶಾಸಕರು!

    ಚುನಾವಣೆಗೂ ಮುನ್ನವೇ ಹಿರಿಯೂರು ನಗರಸಭೆಯಲ್ಲಿ ಜೆಡಿಎಸ್ ಖಾತೆ ತೆರೆದಿದ್ದು, ಜೆಡಿಎಸ್ ಅಭ್ಯರ್ಥಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಏಳನೇ ವಾರ್ಡಿನ ಪಾಂಡುರಂಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 29 ರಂದು ನಗರಸಭೆ ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಪಾಂಡುರಂಗ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾವಾಗಿತ್ತು. ಈರಲಿಂಗೆಗೌಡ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಹೇಳಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ….

  • ಸ್ಪೂರ್ತಿ

    ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಕೆ ಪಿಎಚ್‍ಡಿ ಮಾಡಿದ್ದಾರೆ..!ತಿಳಿಯಲು ಇದನ್ನು ಓದಿ..

    ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮುಂದೆ ಸಾಗಬೇಕೆ ಹೊರತು ಹಿಂದಡಿ ಇಡಬಾರದು. ಅಂಗವೈಕಲ್ಯ ಇದೆ ಎಂದು ನೋವನುಭವಿಸಬಾರುದು. ಅದನ್ನು ಜಯಿಸಬೇಕು. ಯಶಸ್ಸಿನಿಂದ ಮುಂದೆ ಸಾಗಬೇಕು. ಮಾಳವಿಕಾ ಅಯ್ಯರ್‌ ಯುವತಿ ತನ್ನ 13ನೇ ವರ್ಷ ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಗ ಪಿಎಚ್‍ಡಿ ಮಾಡಿದ್ದಾರೆ. ತನ್ನಂತಹ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದ್ದಾರೆ. ಆಕೆ ಬಿಕನೀರ್ ಮೂಲದವರು. ಮಾಳವಿಕಾ ಅಯ್ಯರ್‌ದು ತಮಿಳುನಾಡಿನ ಕುಂಭಕೋಣ ಪ್ರದೇಶ. ಅಲ್ಲೇ ಬೆಳದಳು. ಆದರೆ ತಂದೆಗೆ ಬಿಕನೀರ್‌ಗೆ ಟ್ರಾನ್ಸ್‌ಫರ್ ಆಯಿತು. ಆತ ವಾಟರ್ ವರ್ಕ್ಸ್ ಇಲಾಖೆಯಲ್ಲಿ…

  • ಉಪಯುಕ್ತ ಮಾಹಿತಿ

    ಕಾರಿನ ಹಿಂಭಾಗದಲ್ಲಿ ಈ ರೀತಿ ಶೇಪ್ ಯಾಕೆ ಇರುತ್ತದೆ ಗೊತ್ತಾ?

    ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ…

  • ಉಪಯುಕ್ತ ಮಾಹಿತಿ

    ಶೀಘ್ರದಲ್ಲೇ ‘ಸಂಪೂರ್ಣ ಉಚಿತ ಜಿಯೋ ಆಂಡ್ರಾಯ್ಡ್ ಫೋನ್ ‘..!ತಿಳಿಯಲು ಈ ಲೇಖನ ಓದಿ..

    ರಿಯಲನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಆಕರ್ಷಕ ಆಫರ್ ಮತ್ತು ವೇಗದ ಇಂಟರ್ನೆಟ್ ನಿಂದಾಗಿ ಜನರಿಗೆ ಹತ್ತಿರವಾಗಿದೆ.

  • ಸುದ್ದಿ

    ಬಿಎಸ್ಎನ್ಎಲ್ ಬಳಸುತ್ತಿರುವ ಗ್ರಾಹಕರಿಗೊಂದು ಸಂತಸದ ಸುದ್ದಿ ..!ಸುಳ್ಳು ವದಂತಿಗಳಿಗೆ ಬ್ರೇಕ್….

    ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಚ್ಚಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತಾಗಿ ಸಂಸ್ಥೆಯ ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದು, ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ವದಂತಿ ನಿಜವಲ್ಲ. ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಕೆಲವರು ಬಿಎಸ್ಎನ್ಎಲ್ ಮುಚ್ಚುವ ಕುರಿತು ವದಂತಿ ಹರಡುತ್ತಿದ್ದಾರೆ. ಸಂಸ್ಥೆಯ ಸೇವೆ…