ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದು, ಸರ್ಕಾರದಿಂದಲೇ ಸಾಮೂಹಿಕ ವಿವಾಹ ಯೋಜನೆ ರೂಪಿಸುವ ಬಗ್ಗೆ ಮಾತನಾಡಿದ್ದಾರೆ. ಎ-ದರ್ಜೆಯ ದೇಗುಲಗಳಲ್ಲಿ ವಿವಾಹಕ್ಕೆಅವಕಾಶ ಮಾಡಿಕೊಡಲಾಗುವುದು. ಧಾರ್ಮಿಕ ದತ್ತಿ ಇಲಾಖೆಯ100 ದೇಗುಲ ಆಯ್ಕೆ ಮಾಡಿಕೊಂಡಿದ್ದೇವೆ. ಏ.26,ಮೇ 24ರಂದು ವಿವಾಹ ನಡೆಸಲು ನಿರ್ಧಾರ ಮಾಡಲಾಗಿದೆ. ಇದರ ಬಗ್ಗೆ ಸುತ್ತೋಲೆಗಳನ್ನ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಮದುವೆಯ ರೂಲ್ಸ್ ಬಗ್ಗೆ ಮಾತನಾಡಿದ ಪೂಜಾರಿ, ವಿವಾಹಕ್ಕೊಳಗಾಗುವವರಿಗೆ ನಿಯಮ ಮಾಡಿದ್ದೇವೆ. 30 ದಿನಕ್ಕೂ ಮೊದಲೇ ನೊಂದಣಿ ಮಾಡಿಕೊಳ್ಳಬೇಕು. ಎರಡನೇ ಮದುವೆಗೆ ಇಲ್ಲಿ ಅವಕಾಶವಿಲ್ಲ. ವಧು- ವರರ ವಯಸ್ಸು ಖಚಿತತೆ ನೀಡಬೇಕು. ಸ್ಥಳದಲ್ಲಿಯೇ ವಿವಾಹ ನೋಂದಣಿ ವ್ಯವಸ್ಥೆ ಮಾಡಲಾಗುವುದು. ವಧು-ವರರಿಗೆ ಪ್ರೋತ್ಸಾಹ ಧನದ ವ್ಯವಸ್ಥೆಯೂ ಇದೆ. 65 ಸಾವಿರ ರೂ. ಜೋಡಿಗೆ ಖರ್ಚು ಬರಲಿದೆ. ಒಟ್ಟು24 ಕಂಡೀಷನ್‌ಗಳನ್ನ ಪೂರೈಸಬೇಕು ಎಂದುಹೇಳಿದ್ದಾರೆ.
ವಧು- ವರರಿಗೆ 18/21 ವರ್ಷ ವಯಸ್ಸು ಇರಬೇಕು.ವಯಸ್ಸು ಖಚಿತಪಡಿಸಿಕೊಂಡೇ ವಿವಾಹಕ್ಕೆ ಅವಕಾಶ ನೀಡಲಾಗುವುದು. 40 ಸಾವಿರರೂ.ವೆಚ್ಚದ 8 ಗ್ರಾಂ ಚಿನ್ನದ ಮಾಂಗಲ್ಯಸರ ನೀಡಲಾಗುವುದು. ವರನಿಗೆ 5 ಸಾವಿರ ರೂ, ವಧುವಿಗೆ10 ಸಾವಿರ ವಸ್ತ್ರಕ್ಕೆ ಖರ್ಚು ಮಾಡಲಾಗುತ್ತದೆ. ವಿವಾಹದಬಳಿಕ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ ಎಂದಿದ್ದಾರೆ.
ಸಾಮೂಹಿಕ ವಿವಾಹಕ್ಕೆ ಪ್ರತಿವರ್ಷ 5.5ಕೋಟಿ ಖರ್ಚು ಮಾಡಲಾಗುತ್ತದೆ.55 ಸಾವಿರದಂತೆ 1 ಸಾವಿರ ಜೋಡಿಗೆ 5.5 ಕೋಟಿ ಖರ್ಚಾಗುತ್ತದೆ. ಪ್ರಸ್ತುತ ದೇಗುಲಗಳಲ್ಲಿಯೇ ಹಣದ ವ್ಯವಸ್ಥೆಯಿದೆ. ನಮ್ಮಅನುಮತಿ ಕೊಟ್ಟರೆ ಅವರೇ ಖರ್ಚು ಮಾಡುತ್ತಾರೆ. ಬೆಂಗಳೂರಿನ ಬನಶಂಕರಿ, ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯದಲ್ಲಿ ವಿವಾಹಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.