ಇದೊಂದು ಪಾಗಲ್ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್ ಎಂಜಿನಿಯರ್‌ನೊಬ್ಬ ಧರಣಿ ನಡೆಸು. ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಸ್ತುತ ಪ್ರೀತಿಗಾಗಿ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಆಂಧ್ರ ಮೂಲದ ಚಕ್ರವರ್ತಿ ಎಂಬ ಯುವನೋರ್ವ ರಾಜ್ಯದ ಹುಬ್ಬಳ್ಳಿ ಮೂಲದ ಶ್ವೇತಾ ಎಂಬ ಹುಡುಗಿ ಬೇಕು. ‘ನೀನು ಇಲ್ಲ ಅಂದ್ರೆ ಬೇರೇನು ಇಲ್ಲ. ನನ್ನ ಮದುವೆ ಮಾಡಿಕೊಳ್ಳಿ ಅಂತ’ ಹಠ ಮಾಡಿಕೊಂಡು ಹುಡ್ಗಿ ಮನೆ ಮುಂದೆ ಹುಡುಗ ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಅವರು ಸಿಡ್ನಿಯಲ್ಲಿಯೇ ಖಾಯಂ ನಿವಾಸಿಯಾಗಿದ್ದಾರೆ. ಮ್ಯಾಟರಮೋನಿಯಲ್ಲಿ ಶ್ವೇತಾ ಎಂಬ ಯುವತಿಯನ್ನು ನೋಡಿ ಹೆಚ್ಚು ಕಡಿಮೆ ತಲೆಕೆಡಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ, ಚಕ್ರವರ್ತಿ ಅವರು ಹುಡುಗಿಯ ಮನೆಯವರೊಂದಿಗೆ ಮದುವೆ ಬಗ್ಗೆ ಮಾತುಕತೆ ಸಹ ನಡೆಸಿದ್ದರು. ಮೊದ ಮೊದಲಿಗೆ ಹುಡುಗಿಯ ಕುಟುಂಬದವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ, ಇಬ್ಬರ ಸಮುದಾಯ ಬೇರೆ ಬೇರೆಯಾದ ಪರಿಣಾಮ ಹುಡುಗಿಯ ಮನೆಯವರು ಮದುವೆಗೆ ನಿರಾಕರಣೆ ಮಾಡಿದ್ದಾರೆ.ಇನ್ನು ಆ ಯುವಕ ಸಿಡ್ನಿ ಟು ಬೆಂಗಳೂರಿಗೆ ಆಗಮಿಸಿ ಹುಡುಗಿಯ ಜೊತೆ ಮಾತಕತೆ ಸಹ ನಡೆಸಿದ್ದರು.
ಚಕ್ರವರ್ತಿ ಇದೀಗ ಶ್ವೇತಾಳಯೊಂದಿಗೆ ಮದುವೆಯಾಗಲೇಬೇಕೆಂದು ಹುಡುಗಿಯ ಮನೆ ಮುಂದೆ ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಧರಣಿ ನಡೆಸುತ್ತಿದ್ದಾರೆ. ಸದ್ಯ ಪಾಗಲ್ ಪ್ರೇಮಿಯ ಕಾಟ ತಡೆಲಾಗದೇ ಹುಡ್ಗಿ ಕುಟುಂಬಸ್ಥರು ಮನೆ ಬಿಟ್ಟು ಬೇರೆಕಡೆ ಹೋಗಿದ್ದಾರೆ. ಚಕ್ರವರ್ತಿ ಅವರು ಮನವೊಲಿಸಲು ಪೊಲೀಸರು ಹರಸಾಹಸ. ಹುಡುಗಿಯೂ ಮದುವೆಗೆ ನಿರಾಕರಿಸಿ ಪೊಲೀಸರಿಗೆ ಪತ್ರ ಬರೆದುಕೊಟ್ಟರು ಕೂಡ ಆ ಯುವಕ ಮಾತ್ರ ನನಗೆ ಅವಳೇ ಬೇಕು, ಅವಳೊಂದಿಗೆ ಮದುವೆಯಾಗಲೇಬೇಕೆಂದು ಈ ಪ್ರೇಮಿ ಪಟ್ಟು ಹಿಡಿದುಕೊಂಡು ಕುಳಿತ್ತಿದ್ದಾರೆ.