ಸಿನಿಮಾ

ನನ್ನಂತಹವರು ಎಷ್ಟೇ ಜನರು ಬಂದ್ರೂ, ಈ ನಾಲ್ಕು ಹೆಸರನ್ನು ಜನರ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ ಎಂದ ಚಾಲೆಂಜಿಂಗ್ ಸ್ಟಾರ್..!

By admin

April 04, 2019

ಇವತ್ತೂ ಕೂಡಾ ಮಂಡ್ಯದಲ್ಲಿ ದರ್ಶನ್ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮಾತನಾಡಿದ ಡಿ ಬಾಸ್‍, ದರ್ಶನ್‍ ಅಂತವರು ಯಾರೇ ಬಂದ್ರೂ, ಇನ್ನೂ ನೂರು ವರ್ಷ ನಾಲ್ಕು ಹೆಸರುಗಳನ್ನು ಅಳಿಸಲಾಗುವುದಿಲ್ಲ ಅಂತಾ ಹೇಳಿದ್ದಾರೆ.

ನಟಸಾರ್ವಭೌಮ ರಾಜ್‍ ಕುಮಾರ್, ಶಂಕರ್ ನಾಗ್‍, ಅಂಬರೀಷ್‍, ವಿಷ್ಣುವರ್ಧನ್‍ ಅವರ ಹೆಸರುಗಳನ್ನು ಅಭಿಮಾನಿಗಳ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ ಎಂದ್ರು. ಈ ಹಿಂದೆ ಮಂಡ್ಯದಲ್ಲಿ ಅಪ್ಪಾಜಿಗೆ ಅವಕಾಶ ಕೊಟ್ಟಿದ್ದೀರಿ, ಇನ್ಮುಂದೆ ಅಮ್ಮನಿಗೂ ಅವಕಾಶ ಕೊಡಿ ಅಂತಾ ಮತ ಯಾಚಿಸಿದ್ದಾರೆ.

ಇದೇ ವೇಳೆ ಸುಮಲತಾ ಕ್ರಮ ಸಂಖ್ಯೆ 20. ದಯವಿಟ್ಟು ಅವರಿಗೆ ಮತ ನೀಡಿ ಅಂತಾ ಕೇಳಿಕೊಂಡ್ರು. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿರೋದ್ರಿಂದ ವಯಸ್ಸಾದವರಿಗೆ ಗೊಂದಲವುಂಟಾಗಬಹುದು. ಹೀಗಾಗಿ ಯುವಕರು, ವಯಸ್ಸಾದವರನ್ನು ಕರೆದುಕೊಂಡು ಹೋಗಿ ಮತ ಹಾಕಿಸಿ ಅಂತಾ ಹೇಳಿದ್ರು.

ಇವತ್ತು ದರ್ಶನ್‍ ಮಂಡ್ಯದ ಕೆ.ಆರ್. ಪೇಟೆ ಸೇರಿದಂತೆ ಸಂತೆ ಬಾಚನಹಳ್ಳಿ, ಕಿಕ್ಕೇರಿ, ಶೀಳನಕೆರೆ, ಅಕ್ಕಿಹೆಬ್ಬಾಳದಲ್ಲಿ ರೋಡ್‍ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ್ರು.