ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ನ ಬಳಕೆ ಅತಿ ಹೆಚ್ಚಾಗಿದ್ದು ನದಿಯ ಮಾಲಿನ್ಯಕ್ಕೆ ತುತ್ತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗಳು ಕೂಡ ತಾವು ತರುವ ವಸ್ತುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರೆ ಅಲ್ಲಿ ಬಿಸಾಡಿ ಹೋಗುತ್ತಾರೆ. ಇದು ತೀರಾ ನದಿಯ ಮಾಲಿನ್ಯಕ್ಕೆ ತುತ್ತಾಗಿದೆ. ಆದರೆ ಇಲ್ಲಿ 48 ವರ್ಷದ ಕಾಳಿಪದ ದಾಸ್ ಎಂಬುವವರು ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುವ ಕಾರ್ಯವನ್ನು ಮಾಡುತ್ತಾರೆ. ಇವರು ಮೂಲತಃ ಪಶ್ಚಿಮ ಬಂಗಳಾದವರಾಗಿದ್ದು ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ.
ಗಂಗಾ ನದಿಯಲ್ಲಿ ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ‘ನಮಾಮಿ ಗಂಗೆ’ ಎಂಬ ಯೋಜನೆಯನ್ನು ಶುರು ಮಾಡಿತ್ತು. ಆದರೆ ಕಾಳಿಪದ ಅವರು ಈ ಯೋಜನೆಯ ಹೆಸರು ಕೂಡ ಕೇಳಿಲ್ಲ. ಆದರು ಸಹ ಅವರು ಗಂಗಾ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿದ್ದಾರೆ. ಕಾಳಿಪದ ಬೆಲ್ಡಂಗಾದ ಕಲಾಬೇರಿಯಾದಿಂದ ಕೆಲಸ ಶುರು ಮಾಡುತ್ತಾರೆ. ಅವರು ತಮ್ಮ ದೋಣಿಯಿಂದ ಅನೇಕ ಘಾಟ್‍ಗಳಿಗೆ ಹೋಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎತ್ತುತ್ತಿದ್ದಾರೆ. ಅವರ ಕೆಲಸ ಭಗೀರಥ ಸೇತುವೆ ಅಥವಾ ಬೆಹ್ರಾಂಪೋರ್‍ನ ಫರ್ಶ್‍ದಂಗಾ ಘಾಟ್‍ನಲ್ಲಿ ಕೊನೆ ಆಗುತ್ತೆ.
ನಾನು ಈಗ ಮೀನು ಹಿಡಿಯುವುದನ್ನು ಬಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಗಂಗಾ ನದಿಯಿಂದ ಎತ್ತುತ್ತಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಹೆಮ್ಮೆ ಇದೆ. ಸರ್ಕಾರ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆ ಗಂಗಾ ನದಿ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹಾಗಾಗಿ ನಾನು ಅನೇಕ ಘಾಟ್‍ಗಳಿಂದ ಕಸ ಎತ್ತುತ್ತಿದ್ದೇನೆ ಎಂದು ಕಾಳಪದ ತಿಳಿಸಿದ್ದಾರೆ. ನಾನು ಇತರೆ ಮೀನುಗಾರರಿಂದಿಗೆ ದೋಣಿಯಲ್ಲಿ ಹೋಗುತ್ತೇನೆ. ಬಳಿಕ ನಾನು ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತೇನೆ. ಪ್ರತಿದಿನ 5ರಿಂದ 6 ಗಂಟೆ ಕೆಲಸ ಮಾಡಿ 2 ಕ್ವಿಂಟಲ್ ಪ್ಲಾಸ್ಟಿಕ್ ಹೆಕ್ಕುತ್ತೇನೆ. ಬಳಿಕ ಇದನ್ನು ರಿಸೈಕಲ್‍ಗೆ ಕೊಟ್ಟು 2,400 ರೂ.ರಿಂದ 2,600 ರೂ.ವರಗೂ ಸಂಪಾದಿಸುತ್ತೇನೆ. ನಾನು ವಿದ್ಯಾಭ್ಯಾಸ ಮಾಡಿಲ್ಲ. ಆದರೆ ವಿದ್ಯಾಭ್ಯಾಸ ಮಾಡಿರುವ ಜನರನ್ನು ನಾನು ನೋಡುತ್ತೇನೆ. ಅವರು ಪ್ಲಾಸ್ಟಿಕ್ ಬಳಸಿ ಅದನ್ನು ಎಸೆಯುತ್ತಾರೆ ಎಂದು ಕಾಳಿಪದ ಹೇಳಿದ್ದಾರೆ.