inspirational

ಬಾಲಕಿಗೆ ತಿಂಡಿ ಕೊಡಿಸುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಪೋಕ್ಸೊ ಕಾಯಿದೆ ಅಡಿ 20 ವರ್ಷ ಸಜೆ

By KOLAR NEWS CHANDRU

February 28, 2023

ಬಾಲಕಿಗೆ ತಿಂಡಿ ಕೊಡಿಸುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಪೋಕ್ಸೊ ಕಾಯಿದೆ ಅಡಿ 20 ವರ್ಷ ಸಜೆ

ಕೋಲಾರ: ಮಾಲೂರು ತಾಲ್ಲೂಕಿನ ತರ‍್ನಹಳ್ಳಿ ಗ್ರಾಮದ ಮಹೇಶ್ ಬಿನ್ ಲೇಟ್ ಕೃಷ್ಣಪ್ಪ ಎಂಬಾತನು, 13 ವರ್ಷದ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯು ಕೊರೋನಾ ರಜೆಯ ಕಾರಣದಿಂದ ಮನೆಯಲ್ಲಿ ಇದ್ದ ಸಮಯದಲ್ಲಿ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದು, ನೊಂದ ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ನಂಬಿಸಿ, ಅಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿರುವ ಪ್ರಯುಕ್ತ, ನೊಂದ ಬಾಲಕಿಯು ಗರ್ಭಿಣಿಯಾಗಿದ್ದು, ದಿನಾಂಕ 27-08-2021 ರಂದು ನೊಂದ ಬಾಲಕಿಯ ಹೇಳಿಕೆಯ ಪಡೆದು, ಅದರ ಅನ್ವಯ ಮಾಲೂರು ಪೋಲೀಸ್ ಠಾಣಾಧಿಕಾರಿ ಸಿ.ಆರ್. 262/2021 ರಂತೆ ಕಲಂ 376 (2) (ಎನ್) ಐ.ಪಿ.ಸಿ. ಮತ್ತು ಪೋಕ್ಸೊ ಕಾಯ್ದೆ ಅಡಿ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿದ ವೃತ್ತ ನಿರೀಕ್ಷಕರಾದ ಮಾರ್ಕೋಡಯ್ಯರವರು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಸ್ಪೆಷಲ್ ಸಿ. (ಪೋಕ್ಸೋ) 58/2021 ರ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಬಿ.ಪಿ.ದೇವಮಾನೆ ರವರು ವಿಚಾರಣೆ ನಡೆಸಿದ್ದು, ಆರೋಪ ರುಜುವಾತಾದ ಹಿನ್ನಲೆ ಕಲಂ 376 ಐ.ಪಿ.ಸಿ. ಮತ್ತು 6 ಪೋಕ್ಸೊ ಕಾಯ್ದೆ ಅಡಿ 27-02-2023 ರಂದು ಆರೋಪಿಗೆ 20 ವರ್ಷ ಸಜೆ ಜೊತೆಗೆ ರೂ. 25,000/-ಗಳ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳ ಸಜೆಯನ್ನು ವಿಧಿಸಿ, ನೊಂದ ಬಾಲಕಿಗೆ ರೂ.5.00,000/- ಗಳನ್ನು ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದಾರೆ. ಸದರಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಡಿ.ಲಲಿತ ಕುಮಾರಿ ರವರು ವಾದ ಮಂಡಿಸಿದ್ದರು.