ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ ಕಾದು ಭಕ್ತಿ ಮೆರೆದಿದ್ದಾರೆ.
ಅಮ್ಮ ಶ್ರೀರಾಮನ ದೊಡ್ಡ ಭಕ್ತೆ, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಅವರು ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿ ಅಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ಅವರು ಬಹಳ ಖಿನ್ನತೆಗೊಳಗಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಅವರು ಉಪವಾಸ ಮಾಡಲು ಆರಂಭಿಸಿದರು. ಅನ್ನ ಸೇವಿಸುವುದನ್ನು ಬಿಟ್ಟು ಕೇವಲ ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಸಂಬಂಧಿಕರು ಹಲವು ಬಾರಿ ಊಟ ಮಾಡುವಂತೆ ಮನವಿ ಮಾಡಿದರೂ ಅಮ್ಮ ಮಾತ್ರ ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ ಎಂದು ಅಮಿತ್ ತಿಳಿಸಿದರು.
1992ರ ಬಳಿಕ ಆಯೋಧ್ಯ ವಿವಾದ ಮತ್ತಷ್ಟು ಬಿಗಡಾಯಿಸಿತು. ಪ್ರಕರಣ ಇತ್ಯರ್ಥ ವಿಳಂಬವಾಗತೊಡಗಿತು. ತಮ್ಮ ಜೀವಿತಾವಧಿಯಲ್ಲಿ ಆಯೋಧ್ಯೆ ಪ್ರಕರಣ ಇತ್ಯರ್ಥವಾಗುತ್ತೆ ಅನ್ನೋ ನಂಬಿಕೆ ಕ್ಷೀಣಿಸಿತು. ಆದರೆ ನವೆಂಬರ್ 9 ರಂದು ಮುಂಜಾನೆಯಿಂದ ಟಿವಿ ಮುಂದೆ ಕೂತ ಉರ್ಮಿಳಾ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಕ್ಕೆ ಕಾಯುತ್ತಿದ್ದರು. ಆಯೋಧ್ಯೆ ಶ್ರೀರಾಮನಿಗೆ ಎಂದಾಗ ಉರ್ಮಿಳಾ ಸಂತಸಕ್ಕೆ ಪಾರವೇ ಇರಲಿಲ್ಲ. ಇಷ್ಟು ವರ್ಷ ಉಪವಾಸ ಮಾಡಿದ್ದು ಸಾರ್ಥಕಾವಾಯಿತು ಎಂದಿದ್ದಾರೆ.
ತೀರ್ಪು ರಾಮನ ಪರವಾಗಿದೆ. ತೀರ್ಪ ಬಂದ ಬೆನ್ನಲ್ಲೇ ಕುಟುಂಬಸ್ಥರು ಆಹಾರ ಸೇವಿಸಲು ತನಿಸುಗಳನ್ನು ತಂದಿಟ್ಟಿದ್ದಾರೆ. ಆದರೆ. ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾದ ಬಳಿಕ, ರಾಮನ ದರ್ಶನ ಪಡೆದು ಆಹಾರ ಸೇವಿಸುತ್ತೇನೆ. ನನ್ನ ಶಪಥದಲ್ಲಿ ಯಾವುದೇ ಇಲ್ಲ ಎಂದಿದ್ದಾರೆ. 27 ವರ್ಷದಿಂದ ಬಾಳೇ ಹಣ್ಣು ತಿಂದು ಸಣ್ಣಗಾಗಿದ್ದೇನೆ. ಶರೀರ ಶಕ್ತಿ ಕಳೆದುಕೊಂಡಿದೆ. ಆದರೆ ರಾಮನ ಜಪ ಮಾಡುತ್ತಾ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ಆತ್ಮವಿಶ್ವಾಸದಿಂದ ಇದ್ದೇನೆ ಎಂದು ಉರ್ಮಿಳಾ ಹೇಳಿದ್ದಾರೆ.