ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್‌ಪಿಜಿ ಡೀಲರ್ಬಳಿಯೇ ಹೋಗಬೇಕೆಂದೇನಿಲ್ಲ. ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನುಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್‌ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು.
ದೇಶದ ಪ್ರಮುಖ 3 ಎಲ್‌ಪಿಜಿ ಪೂರೈಕೆದಾರ ಕಂಪನಿಗಳ ವೆಬ್‌ಸೈಟ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಜತೆಗೆ ಪ್ರತಿ ಕಂಪನಿಗಳು ಕೂಡ ಪ್ರತ್ಯೇಕ ಆ್ಯಪ್ ಹೊಂದಿದ್ದು, ಅದರ ಮೂಲಕವೂ ಹೊಸ ಸಂಪರ್ಕಕ್ಕೆ ಅರ್ಜಿ, ರಿಫಿಲ್ ಬುಕಿಂಗ್, ಇತರ ಸಂಬಂಧಿತ ಸೇವೆಗಳನ್ನು ಬಳಸಬಹುದು.
ಹೊಸ ಎಲ್‌ಪಿಜಿ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ;.ನಿಮ್ಮ ಆಯ್ಕೆಯ ಎಲ್‌ಪಿಜಿಪೂರೈಕೆದಾರರನ್ನು ಆರಿಸಿಕೊಳ್ಳಿಎಚ್‌ಪಿ ಗ್ಯಾಸ್:https://myhpgas.in/myHPGas/NewConsumerRegistration.aspxಭಾರತ್ ಗ್ಯಾಸ್:https://my.ebharatgas.com/LPGServices/ApplyNewConnectionಇಂಡೇನ್ ಗ್ಯಾಸ್:https://cx.indianoil.in/webcenter/portal/Customer
ಮೇಲಿನ ಲಿಂಕ್ ತೆರೆದ ಬಳಿಕ, ನಿಮ್ಮ ಸಮೀಪದ ಎಲ್‌ಪಿಜಿ ಡೀಲರ್ ಅನ್ನು ಹುಡುಕಿ, ಅಲ್ಲಿ ಸರ್ಚ್ ಆಯ್ಕೆಯಿದೆ. ನಿಮಗೆ ಈಗಾಗಲೇ ಡೀಲರ್ ಗೊತ್ತಿದ್ದರೆ, ಅಲ್ಲಿ ನಮೂದಿಸಬಹುದು. ಬಳಿಕ, ನಿಮ್ಮ ಸಮೀಪದ ಡೀಲರ್ ಆಯ್ಕೆ ಮಾಡಿ. ಎಲ್‌ಪಿಜಿ ಸಿಲಿಂಡರ್ ಡೆಲಿವರಿಗೆ ಏರಿಯಾ ಮಿತಿ ಇರುವುದರಿಂದ, ಸಮೀಪದ ಡೀಲರ್ ಆಯ್ಕೆ ಸೂಕ್ತ. ಬಳಿಕ, ಅಲ್ಲಿರುವ ಫಾರ್ಮ್‌ನಲ್ಲಿ ನಿಮ್ಮ ವಿವರ, ವಿಳಾಸ, ಸಬ್ಸಿಡಿ ನಗದು ವರ್ಗಾವಣೆ-ಬ್ಯಾಂಕ್ ವಿವರ, ಎಷ್ಟು ಸಿಲಿಂಡರ್ ಮತ್ತು ಯಾವ ವಿಧ, ಸಿಲಿಂಡರ್ ಸಾಮರ್ಥ್ಯ ಎನ್ನುವುದನ್ನು ಎಂಟರ್ ಮಾಡಿ. ಬಳಿಕ ನಿಮ್ಮ ಐಡೆಂಟಿಟಿ ಹಾಗೂ ವಿಳಾಸದ ದೃಢೀಕರಣವನ್ನು ಆಯ್ಕೆ ಮಾಡಿ.
ಪಾಸ್‌ಪೋರ್ಟ್ ಸೈಜ್‌ನ ಫೋಟೋ ಮತ್ತು ವಿಳಾಸದ ದೃಢೀಕರಣಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ. ಬಳಿಕ ಅಲ್ಲಿ ನೀಡಿರುವ ನಿಬಂಧನೆಗಳನ್ನು ಓದಿ, ಸಬ್‌ಮಿಟ್ ಕೊಡಿ. ಅದಾದ ನಂತರ, ನಿಮ್ಮನ್ನು ಪಾವತಿ ಪೇಜ್‌ಗೆ ಕರೆದೊಯ್ಯುತ್ತದೆ. ಅಲ್ಲಿ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸಬಹುದು. ಅದಾದ ಬಳಿಕ, ನಿಮಗೆ ರೆಫರೆನ್ಸ್ ನಂಬರ್ ಒಂದು ದೊರೆಯುತ್ತದೆ. ನಿಮ್ಮ ಮೊಬೈಲ್ ಮತ್ತು ಇ ಮೇಲ್‌ಗೆ ಅರ್ಜಿ ಸಲ್ಲಿಸಿದ ದೃಢೀಕರಣ ಬರುತ್ತದೆ. ರೆಫರೆನ್ಸ್ ನಂಬರ್ ಉಪಯೋಗಿಸಿ, ನಿಮ್ಮ ಬುಕಿಂಗ್ ಸ್ಥಿತಿಗತಿ, ಸಿಲಿಂಡರ್ ಡೆಲಿವರಿ ದಿನಾಂಕವನ್ನು ತಿಳಿದುಕೊಳ್ಳಬಹುದು.