ಉಪಯುಕ್ತ ಮಾಹಿತಿ

ಲೋ ಬಿಪಿಯನ್ನು ನಿಯಂತ್ರಿಸಲು ಮನೆಯಲ್ಲಿಯೇ ಈ 5 ಸುಲಭ ಮಾರ್ಗಗಳನ್ನು ಅನುಸರಿಸಿ…

By admin

February 14, 2019

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. ಅದು ಹೇಗೆ ಅಂತ ನೋಡಿ.

ಉಪ್ಪಿನಲ್ಲಿನರುವ ಸೋಡಿಯಂ ಅಂಶ ರಕ್ತದೊತ್ತಡ ಹೆಚ್ಚುವಂತೆ ಮಾಡುತ್ತದೆ. ಹಾಗಾಗಿ ಉಪ್ಪಿನ ನೀರು ಕುಡಿಯಬೇಕು. ಅತಿಯಾದ ಉಪ್ಪಿನಂಶ ಇದ್ದರೂ ಒಳ್ಳೆಯದಲ್ಲ. ಹಾಗಾಗಿ ಮಿತವಾಗಿ ಬಳಸಿ.

ರಕ್ತದೊತ್ತಡ ಕಡಿಮೆಯಾದಾಗ ಸ್ಟ್ರಾಂಗ್ ಕಾಫಿ ಕುಡಿದಲ್ಲಿ ತಕ್ಷಣ ಪ್ರಭಾವ ಬೀರುತ್ತದೆ. ಇದರ ಹೊರತಾಗಿ ಚಾಕ್ಲೆಟ್, ಕೋಲ ಮತ್ತು ಕೆಫೆನ್ ಯುಕ್ತ ಖಾದ್ಯ ಪದಾರ್ಥಗಳ ಸೇವನೆಯಿಂದ ರಕ್ತದೊತ್ತಡ ಸಾಮಾನ್ಯವಾಗುತ್ತದೆ.

ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟ ಕಾಬೂಲ್ ದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ.

ತುಳಸಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ, ಮ್ಯಾಗ್ನೆಶಿಯಂ ಮುಂತಾದ ಸತ್ವಗಳು ಮೆದುಳು ಮತ್ತು ದೇಹವನ್ನು ಸುಸ್ಥಿತಿಯಲ್ಲಿ ಇಡುತ್ತದೆ.

ನೀರಿಗೆ ನಿಂಬೆರಸ ಬೆರೆಸಿ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುತ್ತದೆ.