ತನ್ನ ಪ್ರಿಯತಮೆಯ ಸಾವಿನಿಂದ ನೊಂದಿದ್ದ ಪ್ರಿಯಕರ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಬಳಿಕ ಮನೆಗೆ ಬಂದು ತಾನೂ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
22 ವರ್ಷದ ವಿತೀಶ್ವರನ್ ಆತ್ಮಹತ್ಯೆಗೆ ಶರಣಾದ ಪ್ರಿಯತಮ. ಈತ ಬಾಲ್ಯದಲ್ಲಿರುವಾಗಲೇ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದನು. ವಿತೀಶ್ವರನ್ ವಿದ್ಯಾಭ್ಯಾಸ ಮುಗಿದ ಬಳಿಕ ಬೇರೆ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗಿದ್ದನು. ಅಲ್ಲಿಂದ ಕೆಲವು ತಿಂಗಳ ನಂತರ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದನು.
ಕೊಡಲು ಜಿಲ್ಲೆಯ ಪರಮೇಶ್ವಾನಲ್ಲೂರು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ವಿತೀಶ್ವರನ್ ಎಂಬ ಈ ಯುವಕ ತನ್ನ ಗ್ರಾಮದ ರಥಿನಾ ಪ್ರಿಯ ಎಂಬಾಕೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ.ತಮ್ಮ ಗ್ರಾಮಕ್ಕೆ ಬಂದ ನಂತರ ರಥಿನಾ ಪ್ರಿಯಾ 21 ಎಂಬ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದಳು.
ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಮೊಬೈಲ್ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ರಥಿನಾ ಪ್ರಿಯಾ ತಾಯಿ, ಮಗಳಿಗೆ ಬೈದಿದ್ದು ಇದರಿಂದ ನೊಂದ ಆಕೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿಷಯ ತಿಳಿದು ಖಿನ್ನತೆಗೊಳಗಾಗಿದ್ದ ವಿತೀಶ್ವರನ್, ಪ್ರೇಯಸಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು, ಮನೆಗೆ ಬಂದ ಬಳಿಕ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.